ತೆಲಂಗಾಣ : ಕಬ್ಬಿಣದ ಸ್ಟ್ಯಾಂಡ್ ಹಿಡಿದು ಬರುತ್ತಿದ್ದವರಿಗೆ ವಿದ್ಯುತ್ ತಗುಲಿದ ಪರಿಣಾಮ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ದುರ್ಮರಣವನ್ನಪ್ಪಿರುವ ಘಟನೆಯೊಂದು ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ದಂಡೇಪಲ್ಲಿ ಮಂಡಲದ ಮೇದರಿಪೇಟೆ ಗ್ರಾಮದಲ್ಲಿ ನಡೆದಿದೆ.
ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕಾರ್ಮಿಕರ ಸುರಕ್ಷತೆ ಕುರಿತು ಕಳವಳಗಳು ವ್ಯಕ್ತವಾಗುತ್ತಿವೆ.
ಮೂವರು ಕೂಲಿ ಕಾರ್ಮಿಕರು ಪೆಟ್ರೋಲ್ ಬಂಕ್ ಬಳಿ ಎತ್ತರದ ಕಬ್ಬಿಣದ ಸ್ಟ್ಯಾಂಡ್ ಅನ್ನು ಸಾಗಿಸುತ್ತಿದ್ದರು. ಈ ವೇೆ ಸ್ಟ್ಯಾಂಡ್ ಆಕಸ್ಮಿಕವಾಗಿ ಮೇಲಿದ್ದ 11 KV ಹೈ-ಟೆನ್ಷನ್ ವಿದ್ಯುತ್ ತಂತಿಗೆ ತಗುಲಿದೆ. ಇದರಿಂದ ಕಬ್ಬಿಣದ ಸ್ಟ್ಯಾಂಡ್ ಮೂಲಕ ವಿದ್ಯುತ್ ಹರಿದಿದ್ದು, ಇಬ್ಬರೂ ಕಾರ್ಮಿಕರಿಗೆ ವಿದ್ಯುತ್ ಪ್ರವಹಿಸಿ, ತೀವ್ರವಾಗಿ ಸುಟ್ಟುಹೋಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅದೃಷ್ಟವಶಾತ್, ಅವರ ಜೊತೆಗಿದ್ದ ಮತ್ತೊಬ್ಬ ವ್ಯಕ್ತಿ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಮೃತರ ಪೈಕಿ ಒಬ್ಬರ ಕುಟುಂಬ ಸದಸ್ಯರು ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ : MBBS ಮುಗಿಸಿದವರಿಗೆ ಗುಡ್ ನ್ಯೂಸ್.. UPSCಯಲ್ಲಿ 1,358 ಮೆಡಿಕಲ್ ಆಫೀಸರ್ ಹುದ್ದೆಗಳ ನೇಮಕಾತಿ!



















