ಬೆಂಗಳೂರು : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಗೆ ನೂರಾರು ರೂಪಾಯಿ ಟೋಲ್ ವಿಧಿಸುತ್ತದೆ. ಇದರಿಂದಾಗಿಯೇ ಪ್ರಾಧಿಕಾರಕ್ಕೆ ವರ್ಷಕ್ಕೆ ಸಾವಿರಾರು ಕೋಟಿ ರೂಪಾಯಿ ಸಂದಾಯವಾಗುತ್ತಿದೆ. ಇನ್ನೂ ಕೆಲವೆಡೆ ಹೆಚ್ಚಿನ ಟೋಲ್ ಸಂಗ್ರಹಿಸಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಇದರ ಬೆನ್ನಲ್ಲೇ, ಎಕ್ಸ್ ಪ್ರೆಸ್ ವೇಗಳಲ್ಲಿ ಸಂಚರಿಸುವವರಿಗೆ ಹೆದ್ದಾರಿ ಪ್ರಾಧಿಕಾರವು ಗುಡ್ ನ್ಯೂಸ್ ನೀಡಿದೆ.
ಹೌದು, ಎಕ್ಸ್ ಪ್ರೆಸ್ ವೇಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ವಿಧಿಸುವ ಟೋಲ್ ಪ್ರಮಾಣದಲ್ಲಿ ಶೇ.25ರಷ್ಟು ಮೊತ್ತವನ್ನು ಕಡಿತಗೊಳಿಸಲಾಗಿದೆ. ಯಾವ ಎಕ್ಸ್ ಪ್ರೆಸ್ ವೇಗಳು ಸಂಪೂರ್ಣವಾಗಿ ಮುಗಿದಿರುವುದಿಲ್ಲವೋ, ಆ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಗೆ ಇನ್ನು ಮುಂದೆ ಶೇ.25ರಷ್ಟು ರಿಯಾಯಿತಿ ನೀಡಲಾಗಿದೆ.
ಅಂದರೆ, ಎಕ್ಸ್ ಪ್ರೆಸ್ ವೇ ಸಾಗಿ ಹೋಗುವ, ಒಂದು ಕಡೆಯಿಂದ ಆರಂಭವಾಗಿ ಮತ್ತೊಂದು ಕಡೆಯ ಅಂತ್ಯದವರೆಗೆ ಕಾಮಗಾರಿ ಮುಗಿದಿಲ್ಲ ಎಂದಾದರೆ, ಆಗ ಟೋಲ್ ಫೀಸ್ ಕಡಿಮೆಯಾಗುತ್ತದೆ. ಎಕ್ಸ್ ಪ್ರೆಸ್ ವೇಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಿಗಿಂತ ಶೇ.25ರಷ್ಟು ಹೆಚ್ಚಿನ ಮೊತ್ತವನ್ನು ಟೋಲ್ ಫೀಸ್ ಆಗಿ ಪಡೆಯಲಾಗುತ್ತದೆ. ಇದರಿಂದ ವಾಹನ ಸವಾರರಿಗೆ ಸ್ವಲ್ಪ ರಿಲೀಫ್ ಸಿಕ್ಕಂತಾಗಿದೆ.
ಆದರೀಗ, ಕಾಮಗಾರಿ ಮುಗಿಯದ ಹೆದ್ದಾರಿಗಳಲ್ಲಿ ಸಾಮಾನ್ಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಿಧಿಸುವ ಟೋಲ್ ಅನ್ನೇ ವಿಧಿಸಲಾಗುತ್ತದೆ. ಹೊಸ ದರವು ಫೆಬ್ರವರಿ 15ರಿಂದಲೇ ಜಾರಿಗೆ ಬರಲಿದೆ. ಚಾಲ್ತಿಯಲ್ಲಿರುವ ಎಕ್ಸ್ ಪ್ರೆಸ್ ವೇ ಕಾಮಗಾರಿ ಪೂರ್ತಿಯಾಗುವವರಿಗೆ ಶೇ.25ರಷ್ಟು ರಿಯಾಯಿತಿ ದೊರೆಯಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ಇದನ್ನೂ ಓದಿ : ಬೀದರ್‌ನಲ್ಲಿ ಚಂರಡಿಗೆ ಬಿದ್ದು 5 ವರ್ಷದ ಬಾಲಕ ಸಾ*ವು!



















