ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯರ ವಿರುದ್ಧ ಮುಡಾ ಹಗರಣದ ಸಂಬಂಧ ಇಂದು ಹೈಕೋರ್ಟ್ ತೀರ್ಪು ಪ್ರಕಟಿಸಲಿದ್ದು, ಸಿದ್ಧರಾಮಯ್ಯರ ಭವಿಷ್ಯ ಏನಾಗಲಿದೆ? ಎಂಬುದು ಕೆಲವೇ ಹೊತ್ತಿನಲ್ಲಿ ತಿಳಿಯಲಿದೆ.
ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಧಾರವಾಡ ಹೈಕೋರ್ಟ್‌ನ ಏಕಸದಸ್ಯ ಪೀಠ ಆಲಿಸಿದ್ದು, ವಾದ ಪ್ರತಿವಾದ ಮುಕ್ತಾಯವಾಗಿದೆ. ಇಂದು ತೀರ್ಪನ್ನು ಪ್ರಕಟ ಮಾಡಲಿದ್ದು ಎಲ್ಲರ ಚಿತ್ತಾ ಕೋರ್ಟ್‌ನತ್ತ ಇದೆ.
ಅಷ್ಟಕ್ಕೂ ಪ್ರಕರಣ ಏನು ಎಂಬುದನ್ನು ಸೂಕ್ಷ್ಮವಾಗಿ ನೋಡುವುದಾದರೆ, ಮೈಸೂರು ನಗರಾಭಿವೃದ್ಧಿ ಇಲಾಖೆಯಲ್ಲಿ ನಡೆದಿರುವ ಅಕ್ರಮದಲ್ಲಿ ಸಿಎಂ ಸಿದ್ಧರಾಮಯ್ಯರ ಕುಟುಂಬಕ್ಕೆ 14 ಖಾಲಿ ನಿವೇಶನ ಹಂಚಿಕೆ ಮಾಡಿತ್ತು. ಇದು ಅಧಿಕಾರ ಬಳಸಿಕೊಂಡು ಮಾಡಲಾಗಿದೆ. ಈ ಪ್ರಕರಣವನ್ನು ಲೋಕಾಯುಕ್ತರ ತನಿಖೆಗೆ ಮಾತ್ರ ನೀಡಬಾರದು. ಇದನ್ನು ಸಿಬಿಐಗೆ ವಹಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಸ್ನೇಹಮಯಿ ಕೃಷ್ಣರ ಪರ ವಕೀಲ ಮಣಿಂದರ್ ಸಿಂಗ್ ವಾದ ಮಾಡಿದರೆ, ಇತ್ತ ಸಿಎಂ ಸಿದ್ಧರಾಮಯ್ಯರ ಪರ ವಕೀಲ ಕಪಿಲ್ ಸಿಬಲ್ ಪ್ರತಿವಾದ ಮಂಡಿಸಿದರು. ವಾದ ಪ್ರತಿವಾದವನ್ನು ಆಲಿಸಿದ್ದ ನ್ಯಾ. ನಾಗಪ್ರಸನ್ನ ನೇತೃತ್ವದ ಪೀಠ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು.
ಇಂದು ನ್ಯಾ.ನಾಗಪ್ರಸನ್ನ ತೀರ್ಪನ್ನು ಪ್ರಕಟಿಸಲಿದ್ದಾರೆ. ಹೀಗಾಗಿ ಇಂದು ಸಿಎಂ ಸಿದ್ಧರಾಮಯ್ಯರ ಭವಿಷ್ಯ ಹೊರಬೀಳಲಿದೆ.