ರಾಯಚೂರು: ತಾಲೂಕಿನ ಏಗನೂರು ಗ್ರಾಮದಲ್ಲಿ ಕೌಟುಂಬಿಕ ಕಲಹಕ್ಕೆ ಬೇಸತ್ತು ವ್ಯಕ್ತಿಯೊಬ್ಬ ಪತ್ನಿ ಹಾಗೂ ಪತ್ನಿಯ ಸಹೋದರಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಆರೋಪಿಯನ್ನು ರಾಯಚೂರು ಗ್ರಾಮೀಣ ಠಾಣೆ ಪೊಲೀಸರು (Raichur Rural Police) ಬಂಧಿಸಿದ್ದಾರೆ. ಪತ್ನಿ ತವರು ಮನೆಯಲ್ಲಿದ್ದ ಸಂದರ್ಭದಲ್ಲಿ ಹಲ್ಲೆ ಮಾಡಿದ್ದಾನೆ. ಪತ್ನಿ ಪದ್ಮ ಹಾಗೂ ಪತ್ನಿಯ ಸಹೋದರಿ ಬೂದೇವಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಆರೋಪಿ ತಿಮ್ಮಪ್ಪ ಹಲ್ಲೆ ಮಾಡಿದವನು. ಮೊದಲನೇ ಪತ್ನಿ ಪದ್ಮಾಗೆ ನಾಲ್ಕು ಮಕ್ಕಳಿದ್ದು ವಿಚ್ಛೇದನ ಕೊಡದೇ ತಿಮ್ಮಪ್ಪ 2ನೇ ಮದುವೆಯಾಗಿದ್ದ. ಹೀಗಾಗಿ ಜೀವನಾಂಶ ಕೋರಿ ಪತ್ನಿ ನ್ಯಾಯಾಲಯ (Court) ಮೆಟ್ಟಿಲೇರಿದ್ದಳು. ಪತ್ನಿಗೆ ತಿಳಿಯದಂತೆ ತಿಮ್ಮಪ್ಪ ಜಮೀನು ಮಾರಾಟ ಮಾಡಿದ್ದ. ಜಮೀನು ವಿಚಾರಕ್ಕೆ ಪತ್ನಿ ಪದ್ಮ ತಕರಾರು ಹಾಕಿದ್ದಳು. ಹೀಗಾಗಿ ಜಗಳ ತೆಗೆದು ಹಲ್ಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಅಕ್ಕನ ಮೇಲಿನ ಹಲ್ಲೆ ತಡೆಯಲು ಹೋಗಿದ್ದ ವೇಳೆ ತಂಗಿ ಬೂದೇವಿ ಮಧ್ಯಪ್ರವೇಶಿಸಿದ್ದಾರೆ. ಅವರ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಮೇಮದುವೆ ಕಾರ್ಡ್ ಕೊಡಲು ಬಂದಿದ್ದ ಬೂದೇವಿ ಅಕ್ಕನನ್ನು ಕಾಪಾಡಲು ಹೋಗಿ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದಾಳೆ. ಈ ಕುರಿತು ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.