ಎಣ್ಣೆ ಗುಂಗಿನಲ್ಲಿ ಏನೂ ನಡೆಯುತ್ತವೆ ಎಂಬುವುದನ್ನೇ ಊಹಿಸಲು ಆಗುವುದಿಲ್ಲ. ಸ್ವತಃ ಮದ್ಯ ಸೇವಿಸಿದವರಿಗೂ ಅದರ ಅರಿವಿರುವುದಿಲ್ಲ. ಇಲ್ಲೋರ್ವ ಮಹಿಳೆ ಎಣ್ಣೆ ಗುಂಗಿನಲ್ಲಿ ತನ್ನ ರಾಜ್ಯಕ್ಕೆ ಹೋಗುವುದನ್ನು ಬಿಟ್ಟು ಭಾರತಕ್ಕೆ ಬಂದಿರುವ ಘಟನೆ ನಡೆದಿದೆ.
ಅಮೆರಿಕದ ಪ್ರಜೆಯೊಬ್ಬರು ಸಿಕ್ಕಾಪಟೆ ಕುಡಿದು ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಆಗ ಅವರು ತನ್ನ ರಾಜ್ಯ ಜಾರ್ಜಿಯಾಕ್ಕೆ ಹೋಗಬೇಕಾಗಿತ್ತು. ಆದರೆ, ತಮ್ಮ ರಾಜ್ಯಕ್ಕೆ ಹೋಗುವ ಟಿಕೆಟ್ ಪಡೆಯುವುದನ್ನು ಬಿಟ್ಟು ಇಂಡಿಯಾ ಟಿಕೆಟ್ ಪಡೆದಿದ್ದಾರೆ. ಕೌಂಟರ್ ಹತ್ತಿರ ಈ ಮಹಿಳೆ ಜಾರ್ಜಿಯಾ ಅಂದಿದ್ದು, ಬಹುಶಃ ಅಲ್ಲಿದ್ದವರಿಗೆ ಇಂಡಿಯಾ ಅಂತ ಅನಿಸಿರಬೇಕು. ಹೀಗಾಗಿ, ಭಾರತಕ್ಕೆ ಟಿಕೆಟ್ ಬುಕ್ ಮಾಡಿದ್ಧಾರೆ. ಈಕೆ ಕೂಡಾ ಭಾರತಕ್ಕೆ ಹೊರಡುವ ವಿಮಾನವನ್ನೂ ಏರಿ ಕುಳಿತಿದ್ದಾಳೆ.
ವಿಮಾನ ಇನ್ನೇನು ಟೇಕ್ ಆಫ್ ಆಗಬೇಕು ಎನ್ನುವಷ್ಟರಲ್ಲಿ ಹಿಂದಿ ಭಾಷೆ ಕೇಳಿ ಮಹಿಳೆಯ ಅಮಲು ಇಳಿದಿದೆ. ಕೂಡಲೇ ಪಕ್ಕದಲ್ಲಿದ್ದವರಿಗೆ ನಾನು ಯಾವ ವಿಮಾನ ಹತ್ತಿದ್ದೇನೆ, ಎಲ್ಲಿಗೆ ಹೊರಟಿದ್ದೇನೆ? ಎಂದು ಪ್ರಶ್ನಿಸಿದ್ದಾಳೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ನೀವು ಕುಡಿದ ಅಮಲಿನಲ್ಲಿ ಜಾರ್ಜಿಯಾ ಬದಲು ಭಾರತಕ್ಕೆ ಟಿಕೆಟ್ ಬುಕ್ ಮಾಡಿ ಭಾರತಕ್ಕೆ ಹೊರಟ ವಿಮಾನ ಹತ್ತಿದರೆ ಏನಾಗುತ್ತೆ?’ ಎಂದು ಈ ಪೋಸ್ಟ್ ನಲ್ಲಿ ಬರೆಯಲಾಗಿದೆ. ಅಮೆರಿಕದಲ್ಲಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರಯಾಣಿಸಲು ವೀಸಾ ಅಗತ್ಯ ಇಲ್ಲ. ಆದರೆ, ಭಾರತಕ್ಕೆ ಬರಬೇಕೆಂದರೆ ವೀಸಾ ಬೇಕಲ್ಲವೇ? ಎಂದು ಈಗ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಹಲವರು ವೀಸಾ, ಆನ್ ಅಲೈವಲ್ ಬಗ್ಗೆಯೂ ಮಾತನಾಡಿದ್ದಾರೆ. ಭಾರತಕ್ಕೆ ಬರಲು ಟಿಕೆಟ್ ಜೊತೆಗೆ ವೀಸಾ ಬೇಕಲ್ಲವೇ ಎಂದು ಕೂಡ ಹಲವರು ಪ್ರಶ್ನಿಸುತ್ತಿದ್ದಾರೆ. ಕೆಲವರು ನಿಮ್ಮ ಬೋರ್ಡಿಂಗ್ ಪಾಸ್ ಚೆಕ್ ಮಾಡುವವರೂ ಕುಡಿದಿದ್ದರಾ ಎಂದು ಪ್ರಶ್ನಿಸಿದ್ದಾರೆ.