ನವದೆಹಲಿ: ಪಾಪಿ ಪಾಕಿಸ್ತಾನ್ ತನ್ನ ತಟ್ಟೆಯಲ್ಲಿ ತಿನ್ನಲು ಅನ್ನ ಇಲ್ಲದಿದ್ದರೂ ತನ್ನ ವಿನಾಶ ಹಾಗೂ ಸಂಹಾರಕ್ಕೆ ತಾನೇ ಮುಂದಡಿ ಇಡುತ್ತಿದೆ. ತನ್ನ ಸ್ವಯಂ ವಿನಾಶಕ್ಕೆ ನಾಂದಿ ಹಾಡುತ್ತಿದೆ. ಪಹಲ್ಗಾಮ್ ಘಟನೆಯ ನಂತರ ಪಾಪಿ ಪಾಕ್ ಮತ್ತೆ ಉದ್ಧಟತನ ಮೆರೆಯುತ್ತಿದ್ದು, ಗಡಿಯಲ್ಲಿ ಗುಂಡಿನ ಸದ್ದು ಮಾಡುತ್ತಿದೆ. ಈ ಮೂಲಕ ತನ್ನನ್ನೇ ತಾನು ಬಲಿ ಕೊಡಲು ಆಹ್ವಾನ ನೀಡುತ್ತಿದೆ.
ಪಾಕಿಸ್ತಾನ್ ಆರ್ಥಿಕವಾಗಿ ಜರ್ಜಿರಿತವಾಗಿ ಹೋಗಿದೆ. ಜಗತ್ತಿನ ಮುಂದೆ ಭಿಕ್ಷಾಪಾತ್ರೆ ಹಿಡಿದು ಕುಳಿತಿದೆ. ಕಳೆದ ಎರಡು ದಿನಗಳ ಹಿಂದೆ ನಡೆದ ಪಹಲ್ಗಾಮ್ ನರಮೇಧದ ಬಳಿಕ ಭಾರತ ಹಲವಾರು ಕಟ್ಟುನಿಟ್ಟಿನ ರಾಜತಾಂತ್ರಿಕ ನಿರ್ಧಾರಗಳನ್ನು ಕೈಗೊಂಡಿದೆ. ಈ ನಿರ್ಧಾರ ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳುವ ಏಟು ಕೊಟ್ಟಿದೆ. ಅಲ್ಲಿನ ಆರ್ಥಿಕ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.
ಪಾಕ್ ನ ಹೇಯಕೃತ್ಯದಿಂದಾಗಿ ಭಾರ ಹೇಯಕೃತ್ಯಕ್ಕೆ ಪ್ರತೀಕಾರವಾಗಿ ಪಾಕಿಸ್ತಾನ ವಿರುದ್ಧ ಭಾರತ ಪರೋಕ್ಷವಾಗಿ ಆರ್ಥಿಕ ಸಮರ ಸಾರಿದೆ. ನೇರ ಯುದ್ಧಕ್ಕೂ ಮೊದಲು ಮೋದಿ, ಶತೃವಿನ ಬೆನ್ನೆಲುಬು ಮುರಿಯುವ ತಂತ್ರಕ್ಕೆ ಕೈ ಹಾಕಿದ್ದಾರೆ. ಮೊದಲ ಹಂತದಲ್ಲಿ ಸಿಂಧು ಜಲ ಒಪ್ಪಂದ ಅಮಾನತುಗೊಳಿಸಿ, ಅಟ್ಟಾರಿ-ವಾಘಾ ಗಡಿ ಬಂದ್ ಮಾಡುವ ಮೂಲಕ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ್ದಾರೆ. ವೈದ್ಯಕೀಯ ವೀಸಾ ಸೇರಿದಂತೆ ಎಲ್ಲ ಬಗೆಯ ವೀಸಾ ರದ್ದುಗೊಳಿಸಿದ್ದಾರೆ.
ಭಾರತ-ಪಾಕಿಸ್ತಾನ್ ಮಧ್ಯೆ 1960ರಲ್ಲಿ ಸಿಂಧು ಒಪ್ಪಂದ ರೂಪಿತವಾಗಿತ್ತು. ಸಿಂಧು ಕಣಿವೆಯ ಆರು ನದಿಗಳಾದ ರಾವಿ, ಬಿಯಾಸ್, ಸಟ್ಲೇಜ್ (ಭಾರತದ ಪಾಲು), ಜೀಲಂ, ಚೇನಾಬ್, ಇಂಡಸ್ (ಪಾಕಿಸ್ತಾನ ಪಾಲು) ಒಳಗೊಂಡ ಒಪ್ಪಂದವಾಗಿದೆ. 65 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ಒಪ್ಪಂದಕ್ಕೆ ಭಾರತ ಬ್ರೇಕ್ ಹಾಕಿದೆ.



















