ಬೆಳಗಾವಿ: ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಪಂಚಮಸಾಲಿಗರ ಹೋರಾಟ ತೀವ್ರ ಸ್ವರೂಪ ಪಡೆದಿದೆ.
ಹೋರಾಟಗಾರರು ಸುವರ್ಣಸೌದಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಲಾಠಿ ಚಾರ್ಜ್ ನಡೆದಿದೆ. ಆದರೂ ಸಹ ಪ್ರತಿಭಟನೆಕಾರರು ಬ್ಯಾರಿಕೇಡ್ ಗಳನ್ನು ತಳ್ಳಿ ಸುವರ್ಣ ಸೌಧಕ್ಕೆ (Suvarna Soudha) ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಮಾತುಕತೆಗೆ 10 ಜನ ಮುಖಂಡರನ್ನು ಆಹ್ವಾನಿಸಲಾಗಿತ್ತು ಎಂದು ಸಿಎಂ ಹೇಳಿದ್ದು, ಇದಕ್ಕೆ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸರ್ಕಾರ ನಮ್ಮ ಹೋರಾಟ ಹತ್ತಿಕ್ಕುವ ಕೆಲಸ ಮಾಡಿದೆ. ಸದನದಲ್ಲಿ ನಮ್ಮನ್ನು ಶೂದ್ರರು ಎನ್ನುವ ಸಿಎಂ, ನಮಗೆ 2ಎ ಮೀಸಲಾತಿ ಕೊಡಬೇಕಿತ್ತು. ಈ ಹಿಂದೆ ಯಾವ ಸರ್ಕಾರದಿಂದಲೂ ನಮ್ಮ ಮೇಲೆ ದೌರ್ಜನ್ಯವಾಗಿರಲಿಲ್ಲ. ಯಡಿಯೂರಪ್ಪ ಸರ್ಕಾರ, ಬೊಮ್ಮಾಯಿ ಸರ್ಕಾರ ಹೀಗೆ ಮಾಡಿಲ್ಲ. ನಮಗೆ ಯಾವುದೇ ಆಹ್ವಾನ ನೀಡದೆ ಸಿಎಂ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿಎಂ ಈ ಹೋರಾಟಕ್ಕೆ ಸಂಬಂಧಿಸಿದಂತೆ ನನ್ನ ಒಬ್ಬನನ್ನಾದರೂ ಕರೆಯಬೇಕಿತ್ತು. ಸಿಎಂ ಸ್ಥಳಕ್ಕೆ ಬರಬೇಕು ಎಂಬುವುದು ನಮ್ಮ ಬೇಡಿಕೆ ಇತ್ತು. ಇಲ್ಲದೇ ಹೋದರೆ ಆಮರಣಾಂತ ಉಪವಾಸ ಮಾಡುತ್ತೇನೆ ಎಂದು ಹೇಳಿದ್ದಾರೆ.