ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಶನಿವಾರ 2025-26ನೇ ಸಾಲಿನ ಬಜೆಟ್ ಘೋಷಿಸಿದ್ದಾರೆ. ರಾಜ್ಯಕ್ಕೆ ತೆರಿಗೆ ಹಂಚುವ ಘೋಷಣೆ ಕೂಡ 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಆಗಿದೆ. ರಾಜ್ಯಕ್ಕೆ ಕೇಂದ್ರದಿಂದ ಸಿಹಿ ಸುದ್ದಿ ಸಿಕ್ಕಿದೆ.
ರಾಜ್ಯ ಸರ್ಕಾರ 46,300 ಕೋಟಿ ರೂ. ತೆರಿಗೆ ನಿರೀಕ್ಷಿಸಿತ್ತು. ಆದರೆ, ಸಿದ್ದರಾಮಯ್ಯ ಸರ್ಕಾರ ನಿರೀಕ್ಷೆ ಮಾಡಿದ್ದಕ್ಕಿಂತ ಶೇ. 3.6ರಷ್ಟು ಹೆಚ್ಚಿನ ತೆರಿಗೆ ಪಾಲು ರಾಜ್ಯಕ್ಕೆ ಸಿಗಲಿದೆ. ಜಿಎಸ್ಟಿ ( Goods and Services Tax ) ಪಾವತಿಸುವಲ್ಲಿ ಕರ್ನಾಟಕ(1,35,953 ಕೋಟಿ ರೂ. ವಾರ್ಷಿಕ) ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ತೆರಿಗೆ ಹಂಚಿಕೆಯಲ್ಲಿ, ದೇಶದಲ್ಲಿ ಹತ್ತನೇ ಸ್ಥಾನದಲ್ಲಿದೆ.
ರಾಜ್ಯಕ್ಕೆ ಹೆಚ್ಚುವರಿ ಶೇ.3.6ರಷ್ಟು 5,576.54 ಕೋಟಿ ರೂ. ವಾರ್ಷಿಕ ಹೆಚ್ಚುವರಿ ಸಿಗಲಿದೆ. ಹಣಕಾಸು ಆಯೋಗದ ಶಿಫಾರಸಿನಂತೆ, ತೆರಿಗೆ ಹಣವನ್ನು ರಾಜ್ಯಕ್ಕೆ ಹಂಚಲಾಗುತ್ತದೆ.
ತೆರಿಗೆ ಪಾಲು ಪಟ್ಟಿ ನೋಡುವುದಾದರೆ….
ಉತ್ತರ ಪ್ರದೇಶ – 2,55,172.21 ಕೋಟಿ ರೂಪಾಯಿ
ಬಿಹಾರ : 1,43,069.04 ಕೋಟಿ ರೂಪಾಯಿ
ಮಧ್ಯ ಪ್ರದೇಶ : 1,11,662.87 ಕೋಟಿ ರೂಪಾಯಿ
ಪಶ್ಚಿಮ ಬಂಗಾಳ : 1,07,010 ಕೋಟಿ ರೂಪಾಯಿ
ಮಹಾರಾಷ್ಟ್ರ : 89,855.80 ಕೋಟಿ ರೂಪಾಯಿ
ರಾಜಸ್ಥಾನ : 85,716.48 ಕೋಟಿ ರೂಪಾಯಿ
ಒಡಿಶಾ : 64,408.27 ಕೋಟಿ ರೂಪಾಯಿ
ತಮಿಳುನಾಡು : 58,021 ಕೋಟಿ ರೂಪಾಯಿ
ಆಂಧ್ರ ಪ್ರದೇಶ : 57,566.31 ಕೋಟಿ ರೂಪಾಯಿ
ಕರ್ನಾಟಕ : 51,876.54 ಕೋಟಿ ರೂಪಾಯಿ
ಗುಜರಾತ್ : 49, 472.62 ಕೋಟಿ ರೂಪಾಯಿ