ಪಾಕಿಸ್ತಾನದಲ್ಲಿ ಭೀಕರ ಸ್ಪೋಟ ಸಂಭವಿಸಿದ್ದು, 12 ಜನ ಭದ್ರತಾ ಸಿಬ್ಬಂದಿ ಹಾಗೂ 6 ಜನ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.
ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಚೆಕ್ ಪೋಸ್ಟ್‌ಗೆ ಆತ್ಮಹತ್ಯಾ ಬಾಂಬರ್ ಸ್ಫೋಟಕ ತುಂಬಿದ ವಾಹನವನ್ನು ಡಿಕ್ಕಿ ಹೊಡೆಸಿದ್ದರಿಂದ ಈ ಘಟನೆ ನಡೆದಿದೆ. ಬನ್ನು ಜಿಲ್ಲೆಯ ಮಾಲಿಖೇಲ್ ಸಾಮಾನ್ಯ ಪ್ರದೇಶದಲ್ಲಿರುವ ಚೆಕ್ ಪೋಸ್ಟ್ ಮೇಲೆ ಭಯೋತ್ಪಾದಕರು ದಾಳಿ ಮಾಡಲು ಪ್ರಯತ್ನಿಸಿದರು. ಆದರೆ ಚೆಕ್ ಪೋಸ್ಟ್ ಪ್ರವೇಶಿಸುವ ಅವರ ಪ್ರಯತ್ನ ವಿಫಲವಾಗಿತ್ತು.
ಆದರೂ ಸತತ ಪ್ರಯತ್ನದ ನಂತರ ಈ ದಾಳಿ ನಡೆಸಲಾಗಿದೆ. ಆತ್ಮಹತ್ಯಾ ಬಾಂಬ್ ಸ್ಫೋಟವು ಸುತ್ತಲಿನ ಗೋಡೆಯ ಒಂದು ಭಾಗದ ಕುಸಿತಕ್ಕೆ ಕಾರಣವಾಗಿದೆ. ಇದು ಸುತ್ತಮುತ್ತಲಿನ ಸ್ಥಳಗಳನ್ನು ಹಾನಿಗೊಳಿಸಿತು. ಇದರ ಪರಿಣಾಮವಾಗಿ ಭದ್ರತಾ ಪಡೆಗಳ 12 ಸೈನಿಕರು ಸಾವನ್ನಪ್ಪಿದರು ಎಂದು ಪಾಕ್ ಸೇನೆ ತಿಲಿಸಿದೆ.
ಪಾಕಿಸ್ತಾನದ ಪಿಎಂ ಶೆಹಬಾಜ್ ಷರೀಫ್ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಪ್ರತ್ಯೇಕತಾವಾದಿಗಳ ವಿರುದ್ಧ ಹೊಸ ಮಿಲಿಟರಿ ಆಕ್ರಮಣ ಘೋಷಿಸಿದ್ದಾರೆ.