ಇಂದಿನಿಂದ ಭಾರತ ಹಾಗೂ ಶ್ರೀಲಂಕಾ ಮಧ್ಯೆ ಟಿ20 ಸರಣಿ ಆರಂಭವಾಗಲಿದೆ. ತಂಡದ ನಾಯಕತ್ವವನ್ನು ಸೂರ್ಯಕುಮಾರ್ ಯಾದವ್ ವಹಿಸಿದ್ದು, ಪಂದ್ಯ ಆರಂಭಕ್ಕೂ ಮುನ್ನ ಅವರು ಮಾತನಾಡಿದ್ದಾರೆ.
ತಮ್ಮ ಹೊಸ ಇನ್ನಿಂಗ್ಸ್ ಆರಂಭಿಸುವುದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಸೂರ್ಯಕುಮಾರ್, ರೋಹಿತ್ ಶರ್ಮಾ ಅವರ ಪರಂಪರೆಯನ್ನು ಮುಂದುವರೆಸುವುದಾಗಿ ಹೇಳಿದ್ದಾರೆ. ಶರ್ಮಾ ನಾಯಕತ್ವದಲ್ಲಿ ಭಾರತ ಆಕ್ರಮಣಕಾರಿ ಬ್ರಾಂಡ್ ಕ್ರಿಕೆಟ್ ಆಡಿತ್ತು. ನಾವು ಕೂಡ ಅದನ್ನೇ ಮುಂದುವರೆಸಿಕೊಂಡು ಹೋಗುತ್ತೇವೆ. ಇಲ್ಲಿ ಬದಲಾಗಿರುವುದು ರೈಲಿನ ಇಂಜಿನ್ ಮಾತ್ರ. ಬೋಗಿಗಳು ಹಾಗೆಯೇ ಉಳಿದಿವೆ. ಹೀಗಾಗಿ ಹಳೆಯ ರೈಲೇ ಚಲಿಸಲಿದೆ ಎಂದು ಹೇಳಿದ್ದಾರೆ.
ತಂಡದಲ್ಲಿ ಏನೂ ಬದಲಾಗುವುದಿಲ್ಲ. ಕ್ರಿಕೆಟ್ ಬ್ರ್ಯಾಂಡ್ ಒಂದೇ ಆಗಿರುತ್ತದೆ. ರೋಹಿತ್ ಶರ್ಮಾ ಅವರ ಜಾಗ ತುಂಬಿದ್ದಿರಂದ ನನ್ನಲ್ಲಿ ಹೆಚ್ಚಿನ ಜವಾಬ್ದಾರಿ ಇದೆ. ಹೀಗಾಗಿ ರೋಹಿತ್ ಶರ್ಮಾ ಹಾಕಿಕೊಟ್ಟ ಹಾದಿಯಲ್ಲಿ ಸಾಗುತ್ತೇನೆ ಎಂದು ಹೇಳಿದ್ದಾರೆ. ಮೈದಾನದಲ್ಲೂ ಮತ್ತು ಹೊರಗೂ ನಾಯಕನಾಗಿ ಉಳಿಯುವುದು. ಆದರೆ ನಮ್ಮಿಬ್ಬರ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಆಡುವುದನ್ನು ಹಾಗೂ ಗೆಲ್ಲುವುದನ್ನು ನಾನು ರೋಹಿತ್ ಅವರನ್ನು ನೋಡಿ ಕಲಿತಿದ್ದೇನೆ ಎಂದು ಹೇಳಿದ್ದಾರೆ. ಶ್ರೀಲಂಕಾ ವಿರುದ್ಧ ಮೊದಲ ಟಿ20 ಪಂದ್ಯ ಜುಲೈ 27ರಂದು ನಡೆಯಲಿದೆ. ಎರಡನೇ ಪಂದ್ಯ ಜುಲೈ 28, ಮೂರನೇ ಪಂದ್ಯ ಜುಲೈ 30ರಂದು ನಡೆಯಲಿದೆ.