ಬೆಂಗಳೂರು: ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ಮಂಗಳೂರು ಸುಹಾಸ್ ಶೆಟ್ಟಿ ಹತ್ಯೆಯಿಂದ ಬೆಚ್ಚಿಬಿದ್ದಿದೆ. ಇಂದು ಮಂಗಳೂರು ಬಂದ್ ಗೂ ಕರೆ ಕೊಡಲಾಗಿದೆ. ಇಂತಹ ಘಟನೆಗಳು ಈ ಹಿಂದೆ ಕಾಂಗ್ರೆಸ್ ಇದ್ದಾಗಲೂ ಆಗಿವೆ. ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ 56 ಹಿಂದೂ ಕಾರ್ಯಕರ್ತರ ಕೊಲೆ ಆಗಿದೆ. ಕಾಂಗ್ರೆಸ್ ಬಂದಾಗೆಲ್ಲ ಪಾಕ್ ಜಿಂದಾಬಾದ್ ಕೂಗುವವರು, ಪಾಕ್ ಬಾವುಟ ಹಾರಿಸುವವರು ಹೆಚ್ಚಾಗಿದ್ದಾರೆ.
ಸುಹಾಸ್ ಹತ್ಯೆಗೂ ಪಾಕಿಸ್ತಾನ ಜಿಂದಾಬಾದ್ ಕಾರಣ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವವರ ವಿರುದ್ಧ ಕ್ರಮ ಕೈಗೊಳ್ತಿಲ್ಲ ಯಾಕೆ? ದೇಶದ್ರೋಹಿಗಳ ವಿರುದ್ಧ ಗುಂಡು ಹೊಡೆದು ಸಾಯಿಸುವ ಕಾನೂನು ಬರಬೇಕು. ಸುಹಾಸ್ ಕೊಲೆ ಹಿಂದೂ ಕಾರ್ಯಕರ್ತರಿಗೆ ಬಹಳ ನೋವುಂಟು ಮಾಡಿದೆ. ಇನ್ನೆಷ್ಟು ಹಿಂದೂಗಳ ಹತ್ಯೆ ಆಗಬೇಕು? ಎಂದು ಪ್ರಶ್ನೆ ಮಾಡಿದ್ದಾರೆ.
ಮುಂದುವರೆದು ಸುಹಾಸ್ ಶೆಟ್ಟಿ ಚಲನವಲನ ಬಗ್ಗೆ ಹತ್ಯೆಕೋರರಿಗೆ ಸುಳಿವು ಕೊಟ್ಟವರು ಯಾರು? ಇದರಲ್ಲಿ ಪೊಲೀಸ್ ಇಲಾಖೆ ಕೈವಾಡ ಏನಾದರೂ ಇದೆಯಾ ಎಂಬ ಕುರಿತು ಕೂಡ ತನಿಖೆ ನಡೆಸಬೇಕು. ಸಿದ್ದರಾಮಯ್ಯ ಸರ್ಕಾರ ಬಂದ ನಂತರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ತೀರ ಹದಗೆಟ್ಟಿದೆ ಎಂದು ಸಿದ್ದು ವಾಗ್ದಾಳಿ ನಡೆಸಿದ್ದಾರೆ.