ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ರೆಪೋದರದಲ್ಲಿ ಶೇ.1ರಷ್ಟು ಇಳಿಕೆ ಮಾಡಿದೆ. ಇದರಿಂದಾಗಿ ಬ್ಯಾಂಕುಗಳು ಉಳಿತಾಯ ಖಾತೆ ಹಾಗೂ ನಿಶ್ಚಿತ ಠೇವಣಿ ಅಥವಾ ಎಫ್ ಡಿ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡಿವೆ. ಹಾಗಾಗಿ, ಗ್ರಾಹಕರು ಎಫ್ ಡಿ ಇರಿಸಲು ಹಿಂದೆ-ಮುಂದೆ ನೋಡುತ್ತಿದ್ದಾರೆ. ಇದರ ಮಧ್ಯೆಯೇ, ಐಡಿಬಿಐ ಹಾಗೂ ಇಂಡಿಯನ್ ಬ್ಯಾಂಕ್ ಗಳು ಗ್ರಾಹಕರಿಗೆ ವಿಶೇಷ ಎಫ್ ಡಿ ಆಫರ್ ನೀಡಿವೆ.
ಹೌದು, ಇಂಡಿಯನ್ ಬ್ಯಾಂಕ್ ಹಾಗೂ ಐಡಿಬಿಐ ಬ್ಯಾಂಕ್ ಗಳು ವಿಶೇಷ ಎಫ್ ಡಿ ಆಫರ್ ನೀಡಿವೆ. ಇವುಗಳನ್ನು ಆಯ್ಕೆ ಮಾಡಿಕೊಳ್ಳಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ. 444 ದಿನ, 555 ದಿನ ಹಾಗೂ 700 ದಿನಗಳವರೆಗೆ ಈ ಬ್ಯಾಂಕುಗಳಲ್ಲಿ ಎಫ್ ಡಿ ಇರಿಸಿದರೆ ಶೇ.7.25ರವರೆಗೆ ಬಡ್ಡಿ ಲಾಭ ಸಿಗಲಿದೆ. ಹಿರಿಯ ನಾಗರಿಕರಿಗಂತೂ ಹೆಚ್ಚಿನ ಬಡ್ಡಿಯನ್ನು ಆಫರ್ ಮಾಡಲಾಗಿದೆ.
ಐಡಿಬಿಐ ಬ್ಯಾಂಕ್ ಬಡ್ಡಿದರ
ಎಫ್ ಡಿ ಅವಧಿ ಸಾಮಾನ್ಯ ಜನ ಹಿರಿಯ ನಾಗರಿಕರು
444 ದಿನಗಳು 6.70% 7.20%
555 ದಿನಗಳು 6.75% 7.25%
700 ದಿನಗಳು 6.60% 7.10%
ಇಂಡಿಯನ್ ಬ್ಯಾಂಕ್ ಬಡ್ಡಿದರ
ಎಫ್ ಡಿ ಅವಧಿ ಸಾಮಾನ್ಯ ಜನ ಹಿರಿಯ ನಾಗರಿಕರು
444 ದಿನಗಳು 6.70% 7.20%
555 ದಿನಗಳು 6.60% 7.10%
ನಿಗದಿತ ದಿನಾಂಕದೊಳಗೆ ಗ್ರಾಹಕರು ಎರಡೂ ಬ್ಯಾಂಕುಗಳ ಬ್ರ್ಯಾಂಚ್ ಗಳಿಗೆ ತೆರಳಿ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಎಫ್ ಡಿ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಆದರೆ, ಬ್ಯಾಂಕ್ ಸೂಚಿಸಿರುವ ದಿನಗಳಿಗೂ ಮೊದಲು ಠೇವಣಿ ಹಿಂಪಡೆದರೆ ಶೇ.0.5-1ರಷ್ಟು ದಂಡ ವಿಧಿಸಲಾಗುತ್ತದೆ ಎಂಬುದು ನೆನಪಿರಲಿ.