ಬಿಗ್‌ಬಾಸ್ ಸೀಸನ್ 12 ಮನೆಯಿಂದ ಈ ವಾರ ಯಾರು ಔಟ್ ಆಗ್ತಾರೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದ್ದು ಕಳೆದ ವಾರ ಸೇಫ್ ಆಗಿದ್ದ ಸ್ಪಂದನಾ ಈ ವಾರ ಮನೆಯಿಂದ ಹೊರಗೆ ಬಂದಿದ್ದಾರೆ.
ಕಳೆದ ವಾರ ಬಿಗ್ ಮನೆಯಲ್ಲಿ ಡಬಲ್ ಎಲಿಮಿನೇಷನ್ ನಡೆದಿತ್ತು. ಅಚ್ಚರಿಯಾಗಿ ಮಾಳು ಮತ್ತೆ ಸೂರಜ್ ಹೊರ ಬಂದಿದ್ದರು. ಈ ವಾರ ಸ್ಪಂದನಾ ಮನೆಯಿಂದ ಹೊರಬಂದಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 100 ದಿನಗಳ ಸನಿಹದಲ್ಲಿ ಸಾಗುತ್ತಿದ್ದು, ಇನ್ನೆರಡು ವಾರಗಳಲ್ಲಿ ಶೋಗೆ ತೆರೆ ಬೀಳಲಿದೆ. ಹೀಗಾಗಿ ನಿರ್ಣಾಯಕ ಹಂತದಲ್ಲಿ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ.

ಈ ವಾರ 5 ಜನರು ನಾಮಿನೇಟ್ ಆಗಿದ್ದರು. ಸ್ಪಂದನಾ ಸೋಮಣ್ಣ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ಧ್ರುವಂತ್ ಮತ್ತು ಧನುಶ್ ಅವರನ್ನ ನಾಮಿನೇಟ್ ಮಾಡಲಾಗಿತ್ತು. ಇಷ್ಟು ಜನರ ಪೈಕಿ ಸ್ಪಂದನಾ ಅವರೇ ವೀಕ್ ಸ್ಪರ್ಧಿ ಎಂಬುದು ಹಲವರ ಅಭಿಪ್ರಾಯವಾಗಿತ್ತು.
ಸ್ಪಂದನಾ ಸೋಮಣ್ಣ ಅವರು ಮನೆಯಲ್ಲಿ ಅಡುಗೆ ಕೆಲಸ ಮಾಡೋದಿಲ್ಲ, ಟಾಸ್ಕ್ ಆಡೋದಿಲ್ಲ, ಸ್ಟ್ಯಾಂಡ್ ತಗೊಳೋದಿಲ್ಲ, ಒಟ್ಟಾಗಿ ಕಾಣಿಸಿಕೊಳ್ಳೋದಿಲ್ಲ. ಆದರೂ ಅವರು ಹೇಗೆ ಉಳಿದುಕೊಂಡರು ಎನ್ನೋದು ಮನೆಯ ಸದಸ್ಯರ ಅಭಿಪ್ರಾಯವೂ ಆಗಿತ್ತು. ಅಂದಹಾಗೆ ಕಾವ್ಯ ಶೈವ, ಧನುಷ್ ಗೌಡ ಕೂಡ ಸ್ಪಂದನಾ ಸೋಮಣ್ಣ ಉಳಿದುಕೊಂಡಿದ್ದರ ಬಗ್ಗೆ ಕಾಮಿಡಿ ಮಾಡಿದ್ದರು. ಅದನ್ನು ಕೇಳಿ ಸ್ಪಂದನಾ ಅವರು ಕೂಡ ನಕ್ಕಿದ್ದರು.
ಕಳೆದ ವಾರ ಕೂಡ ಸ್ಪಂದನ ಮನೆಯಿಂದ ಹೊರಗೆ ಹೋಗುವುದರಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದರು. ಎಲಿಮಿನೇಷನ್ ನ ಕೊನೆಯ ಹಂತದ ವರೆಗೂ ಹೋಗಿ ಕೊನೆಯಲ್ಲಿ ಸೇಫ್ ಆಗಿದ್ದರು. ಪ್ರತೀ ಬಾರಿ ಕೂಡ ಕೊನೆಯ ಹಂತದ ವರೆಗೂ ಬರುತಿದ್ದ ಸ್ಪಂದನ ಕೂದಲೆಳೆಯಲ್ಲಿ ಸೇವ್ ಆಗುತ್ತಿದ್ದರು. ಆದ್ರೆ ಈ ವಾರ ಮನೆಯಿಂದ ಔಟ್ ಆಗಿ ಹೊರ ಹೋಗಿದ್ದಾರೆ.
ಇದನ್ನೂ ಓದಿ : ‘ತಿಥಿ’ ಸಿನಿಮಾ ಖ್ಯಾತಿಯ ನಟ ಸೆಂಚುರಿ ಗೌಡ ನಿಧನ!



















