ಬೆಂಗಳೂರು : ಹೈಕಮಾಂಡ್ ಮುಂದೆ ಮಾತನಾಡುವುದ್ದಕ್ಕೆ ಬಿಜೆಪಿ ಅವರಿಗ ಧಮ್ಮಿಲ್ಲ, ಗುಲಾಮಗಿರಿ ಎಂದು ಕಾಂಗ್ರೆಸ್ ನಾಯಕರು ಪದೆಪದೆ ಹೇಳುತ್ತಿದ್ದರು. ಈಗ ನಿಮ್ಮ ಪರವಾಗಿಯೇ ಹೆಚ್ಚಾಗಿ ರಾಜಣ್ಣ ಮಾತಾಡಿದರು. ಅವರ ರಕ್ಷಣೆ ಮಾಡಲು ನಿಮಗೆ ಆಗಿಲ್ಲ. ಈಗ ನಿಮ್ಮ ಸ್ವಾಭಿಮಾನವೇ, ಗುಲಾಮಗಿರಿಯೇ ಎಂದು ಎಂದು ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
ವರದಿಗಾರರಿಗೆ ಸ್ಪಂದಿಸಿದ ರವಿ, “ರಾಜಣ್ಣ ಅವರು ನಮ್ಮದೆ ತಪ್ಪು ಇಟ್ಟುಕೊಂಡು ಹೇಳಿದರೆ ಹೇಗೆ? ಚುನಾವಣೆ ಆಯೋಗಕ್ಕೆ ತನ್ನದೇ ಆದ ನೆಟ್ವರ್ಕ್ ಇದೆಯೇ? ಮತದಾರರ ಪರಿಕ್ಷರಣೆ ಮಾಡಿರುವವರು ಎಲ್ಲರೂ ರಾಜ್ಯ ಸರ್ಕಾರದ ನೌಕಕರು ರಾಜಕೀಯ ಪಕ್ಷಗಳಿಗೂ ಇದರ ಜವಾಬ್ದಾರಿ ಇದೆ. ಪ್ರತಿ ಭೂತ್ ಗೆ ಬಿಎಲ್‍ಎ ನೇಮಕ ಮಾಡಲು ಪಕ್ಷಕ್ಕೆ ಅವಕಾಶ ಇದೆ. ಅಕ್ರಮ ನಡೆದಿರುವುದೇ ಆಗಿದ್ದರೆ, ಅದು ರಾಜ್ಯ ಸರ್ಕಾರದ ಜವಾಬ್ದಾರಿ” ಎಂದು ಕೇಳಿದ್ದ ಪ್ರಶ್ನೆಗೆ ಕಾಂಗ್ರೆಸ್ ಹೈಕಮಾಂಡ್ ಈ ರೀತಿ ಉತ್ತರ ನೀಡಿದೆ ಎಂದು ಹೇಳಿದ್ದಾರೆ.
ರಾಜಣ್ಣ ಎಸ್ಟಿ ಎನ್ನುವ ಕಾರಣಕ್ಕೆ ಅವರಿಂದ ರಾಜೀನಾಮೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್‌ನಲ್ಲಿ ಜಾತಿ ಆಧಾರದ ಮೇಲೆ ತಾರತಮ್ಯ ಮಾಡುತ್ತಿದ್ದಾರೆ. ಕೆ ಜೆ ಜಾರ್ಜ್ ಮೇಲೆ ಸ್ಮಾರ್ಟ್ ಮೀಟರ್ ಹಗರಣ ಆರೋಪ ಬಂದಾಗ ಯಾವುದೆ ಕ್ರಮ ತೆಗೆದುಕೊಂಡಿಲ್ಲ. ಜಾರ್ಜ್ ಕೇಳಿದ್ದಕ್ಕಿಂತ ಹೆಚ್ಚು ಕಪ್ಪಕಾಣಿಕೆಯನ್ನು ಹೈಕಮಾಂಡ್‌ಗೆ ಕಪ್ಪಕಾಣಿಕೆಯನ್ನು ಕಳುಹಿಸುತ್ತಾರೆ ಎನ್ನುವ ವದಂತಿ ಕೂಡ ಇದೆ. ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಆದಾಗ ನಾಗೇಂದ್ರ ಮೇಲೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದಾರೆ. ತಂತ್ರ, ಪ್ರತಿತಂತ್ರ ಇರುತ್ತದೆ. ಆದರೆ ಸಿಎಂ ಸಿದ್ದರಾಮಯ್ಯ ಅವರು ರಾಜಣ್ಣ ಸತ್ಯ ಹೇಳಿದ್ದಕ್ಕೆ ಅವರನ್ನು ಬಲಿ ತೆಗೆದುಕೊಂಡಿರುವುದು ತಪ್ಪು ಎಂದಿದ್ದಾರೆ.



















