ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿರುವ ಟ್ರಾಫಿಕ್‌ಗೆ ಜನ ಬೇಸತ್ತು ಹೋಗಿದ್ದಾರೆ. ಅತಿ ಹೆಚ್ಚು ಟ್ರಾಫಿಕ್ ಇರುವ ನಗರಿ ಎನ್ನುವ ಹಣೆಪಟ್ಟಿ ಸಿಲಿಕಾನ್ ಸಿಟಿಗೆ ಅಧಿಕೃತವಾಗಿ ಬಂದಿದೆ.
ಟ್ರಾಫಿಕ್ ನಲ್ಲಿ ಕೊಲಂಬಿಯಾ, ಕೊಲ್ಕತ್ತಾ ನಂತರದ ಸ್ಥಾನ ಬೆಂಗಳೂರಿಗೆ ಲಭಿಸಿದೆ. ಬೆಂಗಳೂರಿನಲ್ಲಿ ಶೇ. 38 ರಷ್ಟು ಟ್ರಾಫಿಕ್ ಸಮಸ್ಯೆ ಇದ್ದು, ʼವರ್ಷಕ್ಕೆ 754 ಗಂಟೆ ಟ್ರಾಫಿಕ್ ನಲ್ಲೇ ಸಿಲಿಕಾನ್ ಸೀಟಿಯ ಮಂದಿ ಕಳೆಯುತ್ತಾರೆ ಎಂಬ ವರದಿ ಖಾಸಗಿ ಸಂಸ್ಥೆಯೊಂದು ನಡೆಸಿರುವ ವರದಿಯಲ್ಲಿ ತಿಳಿದು ಬಂದಿದೆ.
ವಿಶ್ವದಲ್ಲೇ ಹೆಚ್ಚು ಟ್ರಾಫಿಕ್ ಇರುವ ಸಿಟಿಗಳ ಪೈಕಿ ಬೆಂಗಳೂರಿಗೆ ಮೂರನೇ ಸ್ಥಾನ ಲಭಿಸಿದೆ. ದಿನದ ಸುಮಾರು ಶೇ. 8.6 ರಷ್ಟು ಮಂದಿ ಪ್ರಯಾಣದಲ್ಲೇ ಕಳೆಯುತ್ತಾರೆ. ಬೆಂಗಳೂರಿನಲ್ಲಿ ಪ್ರಯಾಣದ ಸಮಯ ಶೇ. 16 ರಷ್ಟು ಹೆಚ್ಚಳವಾಗಿದೆ ಎಂದು ವರದಿ ವಿವರಿಸಿದೆ.