ಮೈಸೂರು : ನಾಳೆ ಮುಖುಮಂತ್ರಿ ಸಿದ್ದರಾಮಯ್ಯ 17ನೇ ದಾಖಲೆ ಬಜೆಟ್ ಮಂಡನೆ ಹಿನ್ನಲೆ ಮೈಸೂರಿನಲ್ಲಿ 8 ಸಾವಿರ ಚದರಡಿ ರಂಗೋಲಿಯಲ್ಲಿ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ಬಿಡಿಸಲಾಗಿದೆ.
ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಕರ್ನಾಟಕದ ಭೂಪಟದ ಒಳಗೆ ಬಜೆಟ್‌ನ ಮುಂಗಡಪತ್ರ ಹಿಡಿದಿರುವ ಸಿಎಂ ಸಿದ್ದರಾಮಯ್ಯ ಭಾವಚಿತ್ರವನ್ನು ಬಿಡಿಸಲಾಗಿದೆ.
ಯತೀಂದ್ರ ಯುವ ಬ್ರಿಗೇಡ್ ವತಿಯಿಂದ ಚಿತ್ರ ಆಯೋಜನೆ ಮಾಡಲಾಗಿದ್ದು, ಕಲಾವಿದ ಪುನೀತ್ ಕೈಚಳಕದಲ್ಲಿ ರಂಗೋಲಿಯ ಮೂಲಕ ಆಕರ್ಷಕವಾಗಿ ಸಿಎಂ ಭಾವಚಿತ್ರ ಮೂಡಿಬಂದಿದೆ.
ಇದನ್ನೂ ಓದಿ : ಟಿ20 ವಿಶ್ವಕಪ್ ಸೆಮಿಫೈನಲ್ | ಸೂರ್ಯಕುಮಾರ್ ಫಾರ್ಮ್ ಬಗ್ಗೆ ಬಾಲ್ಯದ ಕೋಚ್ ಮಹತ್ವದ ಹೇಳಿಕೆ!



















