ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಶಾಕ್ ಎದುರಾಗಿದೆ. ಹಾಲು ಹಾಗೂ ಮೊಸರು ಬೆಲೆ ಬೆನ್ನಲ್ಲೇ ಈಗ ಮೊಟ್ಟೆ ದರ ಏರಿಕೆಯಾಗಿದೆ.ಸದ್ದಿಲ್ಲದೆ ಮೊಟ್ಟೆ ಬೆಲೆಯಲ್ಲಿ 2 ರೂಪಾಯಿ ಹೆಚ್ಚಳವಾಗಿದೆ. ಹಿಂದೆ 5 ರೂಪಾಯಿ ಇದ್ದ ಹೋಲ್ಸೇಲ್ ದರ ಈಗ 7.05 ರೂಪಾಯಿಗೆ ಏರಿಕೆಯಾಗಿದೆ.
ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಮೊಟ್ಟೆ 8 ರೂಪಾಯಿಗೆ ಮಾರಾಟವಾಗುತ್ತಿದೆ. ಸೂಪರ್ಮಾರ್ಕೆಟ್ಗಳಲ್ಲಿ ಒಂದು ಮೊಟ್ಟೆಗೆ 8.50 ರೂಪಾಯಿ ಇದೆ. ಮುಂದಿನ ದಿನಗಳಲ್ಲಿ ಮೊಟ್ಟೆ ದರ 10 ರೂಪಾಯಿ ದಾಟುವ ಆತಂಕವಿದೆ.ಬೆಲೆ ಏರಿಕೆ ಬಿಸಿಗೆ ಗ್ರಾಹಕರು ಕಂಗಾಲಾಗಿದ್ದಾರೆ. ಸದ್ಯಕ್ಕೆ ಚಿಕನ್ ದರದಲ್ಲಿ ಏರಿಕೆ ಇಲ್ಲ. ಆದರೆ ಮುಂದಿನ ದಿನಗಳಲ್ಲಿ ಚಿಕನ್ ದರವೂ ಹೆಚ್ಚಾಗುವ ಸಾಧ್ಯತೆಯಿದೆ.

















