ಬಾಂಗ್ಲಾದೇಶದಲ್ಲಿ ಉಂಟಾದ ಹಿಂಸಾಚಾರದ ಹಿನ್ನೆಲೆಯಲ್ಲಿ ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಭಾರತಕ್ಕೆ ಪಲಾಯನಗೈದ ನಂತರ ಮೊದಲ ಬಾರಿಗೆ ಮಾಜಿ ಪ್ರಧಾನಿ ಶೇಖ್ ಹಸೀನಾ ಮೌನ ಮುರಿದಿದ್ದಾರೆ.
ಜುಲೈನಲ್ಲಿ ಹತ್ಯೆಗಳು ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದವರಿಗೆ ಶಿಕ್ಷೆಗೆ ಒತ್ತಾಯಿಸಿದ್ದಾರೆ. ಆಗಸ್ಟ್ 15ರಂದು ರಾಷ್ಟ್ರೀಯ ಶೋಕಾಚರಣೆ ದಿನವನ್ನು ಗೌರವಯುತ ಹಾಗೂ ಗಂಭೀರವಾಗಿ ಆಚರಿಸಬೇಕೆಂದು ಮನವಿ ಮಾಡಿದ್ದಾರೆ.
ಕಳೆದ ಜುಲೈನಿಂದ ಆಂದೋಲನದ ಹೆಸರಿನಲ್ಲಿ ವಿಧ್ವಂಸಕತೆ, ಬೆಂಕಿ ಹಚ್ಚುವಿಕೆ ಮತ್ತು ಹಿಂಸಾಚಾರದಿಂದಾಗಿ ಅನೇಕ ಜನರು ಸಾವನ್ನಪ್ಪಿದ್ದಾರೆ. ವಿದ್ಯಾರ್ಥಿಗಳು, ಶಿಕ್ಷಕರು, ಪೊಲೀಸರು, ಪತ್ರಕರ್ತರು, ಸಾಂಸ್ಕೃತಿಕ ಕಾರ್ಯಕರ್ತರು, ಕಾರ್ಮಿಕರು, ಅವಾಮಿ ಲೀಗ್ ಮತ್ತು ಅಂಗಸಂಸ್ಥೆ ಮುಖಂಡರು, ಕಾರ್ಮಿಕರು, ಪಾದಚಾರಿಗಳು ಮತ್ತು ವಿವಿಧ ಸಂಸ್ಥೆಗಳಲ್ಲಿ ಭಯೋತ್ಪಾದಕ ದಾಳಿಗೆ ಬಲಿಯಾದ ಕಾರ್ಮಿಕರಿಗೆ ನಾನು ಸಂತಾಪ ಸೂಚಿಸುತ್ತೇನೆ ಎಂದು ಶೇಖ್ ಹಸೀನಾ ಹೇಳಿದ್ದಾರೆ.
ಬಾಂಗ್ಲಾದೇಶದ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಮ್ಯೂಸಿಯಂ ನಾಶ ಖಂಡಿಸಿದ ಶೇಖ್ ಹಸೀನಾ, ಬಾಂಗ್ಲಾದ ರಾಷ್ಟ್ರಪಿತ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರ ನೇತೃತ್ವದಲ್ಲಿ ನಾವು ಸ್ವತಂತ್ರ ರಾಷ್ಟ್ರವಾಗಿ ಸ್ವಾಭಿಮಾನವನ್ನು ಗಳಿಸಿದ್ದೇವೆ.
ಭಿಮಾನವನ್ನು ಪಡೆದುಕೊಂಡಿದ್ದೇವೆ ಮತ್ತು ಸ್ವತಂತ್ರ ದೇಶ ಪಡೆದುಕೊಂಡಿದ್ದೇವೆ. ಅವರಿಗೆ ಅವಮಾನ ಮಾಡುವ ಮೂಲಕ ಲಕ್ಷಾಂತರ ಹುತಾತ್ಮರ ರಕ್ತವನ್ನು ಅವಮಾನಿಸಲಾಗಿದೆ. ನಾನು ದೇಶವಾಸಿಗಳಿಂದ ನ್ಯಾಯವನ್ನು ಬಯಸುತ್ತೇನೆ ಎಂದಿದ್ದಾರೆ.