ಬ್ಯಾಂಕಾಕ್: ಮ್ಯಾನ್ಮಾರ್‌ನಲ್ಲಿ ನಡೆದ ಭೀಕರ ಭೂಕಂಪಕ್ಕೆ (Myanmar Earthquake) ಹಲವೆಡೆ ಗಗನಚುಂಬಿ ಕಟ್ಟಡಗಳು ನೆಲಸಮವಾಗಿವೆ. ಕನಿಷ್ಠ 43 ಕಾರ್ಮಿಕರು ನಾಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಬೆಳಗ್ಗೆ 11:50ರ ಸುಮಾರಿಗೆ 7.7 ತೀವ್ರಯ ಭೂಕಂಪ ಸಂಭವಿಸಿದೆ. ಮಧ್ಯಾಹ್ನ 12:50ರ ಸುಮಾರಿಗೆ 6.8 ತೀವ್ರತೆಯಲ್ಲಿ ಮತ್ತೊಂದು ಬಾರಿ ಭೂಕಂಪ ಸಂಭವಿಸಿದೆ. ಮಯನ್ಮಾರ್ ಗಡಿ ದೇಶವಾಗಿರುವ ಭಾರತದ ನವದೆಹಲಿಯಲ್ಲೂ ಭೂಮಿ ಕಂಪಿಸಿದ ಅನುಭವ ಆಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಸಾಗಯಿಂಗ್ ನಗರದ ವಾಯುವ್ಯಕ್ಕೆ ಭೂಮಿಯ 10 ಕಿ.ಮೀ ಆಳದಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ.
ಆದರೆ, ಇದುವರೆಗೂ ಯಾವುದೇ ಸಾವು- ನೋವು ಕುರಿತು ವರದಿಯಾಗಿಲ್ಲ. ಮ್ಯಾನ್ಮಾರ್‌ನಲ್ಲಿ ಭೂಕಂಪ ಸಂಭವಿಸಿದ ಎಫೆಕ್ಟ್ ಬ್ಯಾಂಕಾಕ್‌ಗೂ ತಟ್ಟಿದೆ. ಬ್ಯಾಂಕಾಕ್ ಹಾಗೂ ಥೈಲ್ಯಾಂಡ್‌ನಲ್ಲೂ ಭೂಮಿ ಕಂಪಿಸಿದ ಅನುಭವ ಆಗಿದೆ. ಕಟ್ಟಡಗಳು ಅಲುಗಾಡಿವೆ, ಕೆಲವಡೆ ಮುಗಿಲೆತ್ತರದ ಕಟ್ಟಗಳು ಧ್ವಂಸವಾದ (Building Collapses) ದೃಶ್ಯಗಳು ಸೆರೆಯಾಗಿವೆ.