ಲಾರಿ, ಬಸ್, ಕಾರುಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿದೆ.
ಗದಗ ನಗರದ ಹೊಸ ಕೋರ್ಟ್ ಸರ್ಕಲ್ ಸಿಗ್ನಲ್ ನಲ್ಲಿ ಈ ಘಟನೆ ನಡೆದಿದೆ. ಸಿಗ್ನಲ್ ಗಮನಿಸದ ಲಾರಿ ಚಾಲಕ ಮುಂದೆ ನಿಂತಿದ್ದ ಬಸ್ ಗೆ ಗುದ್ದಿದ್ದಾನೆ. ಅದರ ಮುಂದಿನ ಕಾರಿಗೆ ಬಸ್ ಗುದ್ದಿದೆ. ಲಾರಿ ಚಾಲಕನ ಅಜಾಗರೂಕತೆಯಿಂದ ಈ ಘಟನೆ ನಡೆದಿದೆ. ಆದರೆ, ಯಾವುದೇ ಪ್ರಾಣಾಪಾಯ ಸಂಬವಿಸಿಲ್ಲ. ಬಸ್ ನ ಹಿಂದಿನ ಗ್ಲಾಸ್ ಪುಡಿ ಪುಡಿಯಾಗಿದೆ. ಕಾರು ಕೂಡ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಟ್ರಾಪಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ನಡೆದಿದೆ.