ಬೆಂಗಳೂರು : ಇಲ್ಲಿಯ ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಹತ್ತಿರ ಸರಣಿ ಅಪಘಾತ ನಡೆದಿರುವ ಘಟನೆ ನಡೆದಿದೆ.
ಸಾರಿಗೆ ಬಸ್ ಹಾಗೂ ಆಟೋ ಮಧ್ಯೆ ಅಪಘಾತ ನಡೆದಿದೆ. ಪರಿಣಾಮ ಪಕ್ಕದಲ್ಲಿ ಹೊರಟಿದ್ದ ವಾಹನಗಳಿಗೂ ಡ್ಯಾಮೇಜ್ ಆಗಿದೆ. ಅಪಘಾತದ ತೀವ್ರತೆಗೆ ಸಾರಿಗೆ ಬಸ್, ಡಿವೈಡರ್ ಗೆ ಗುದ್ದಿ ಆಚೆ ಬಂದಿದೆ.
ಆಟೋ ಚಾಲಕ ರೈಟ್ ಸೈಡ್ ನಲ್ಲಿ ಓವರ್ ಟೇಕ್ ಮಾಡಲು ಯತ್ನಿಸಿದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಪರಿಣಾಮ ಆಟೋ ಸಂಪೂರ್ಣವಾಗಿ ಜಖಂ ಆಗಿದೆ. ಸಾರಿಗೆ ಬಸ್ ಗೂ ಹಾನಿಯಾಗಿದೆ. ಘಟನೆಯಲ್ಲಿ ಇಬ್ಬರೂ ಚಾಲಕರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಭೇಟಿ ನೀಡಿದ್ದಾರೆ.