ತಮಿಳುನಾಡು: ಮಹಿಳೆ ಮತ್ತು ಯುವತಿಯ ಸಲಿಂಗ ಕಾಮದ ದಾಹಕ್ಕೆ ಐದು ತಿಂಗಳ ಕಂದಮ್ಮ ಬಲಿಯಾಗಿರುವ ಘಟನೆ ರಾಜ್ಯದ ಗಡಿಭಾಗ ತಮಿಳುನಾಡಿನ ಕೆಳಮಂಗಲಂ ಸಮೀಪದ ಚಿನ್ನಟ್ಟಿಯಲ್ಲಿ ನಡೆದಿದೆ.
ಭಾರತಿ (26) ಎಂಬ ವಿವಾಹಿತೆಯ ಜೊತೆ ಸುಮಿತ್ರಾ (22) ಎಂಬ ಯುವತಿ ಸಲಿಂಗ ಕಾಮ ನಡೆಸುತ್ತಿದ್ದಳು. ಸುರೇಶ್ ಮತ್ತು ಭಾರತಿಗೆ ಮದುವೆಯಾಗಿ ಐದು ವರ್ಷವಾಗಿತ್ತು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು, ಒಂದು ಗಂಡು ಮಗುವಿತ್ತು. ಅದೇ ಏರಿಯಾದ ಯುವತಿ ಸುಮಿತ್ರಾ ಎಂಬಾಕೆಯ ಜೊತೆಗೆ ಭಾರತಿ ಸ್ನೇಹ ಬೆಳೆಸಿಕೊಂಡಿದ್ದಳು. ಸ್ನೇಹ ಸಲಿಂಗ ಕಾಮಕ್ಕೆ ತಿರುಗಿ, ಪತಿ ಇಲ್ಲದೆ ಇದ್ದಾಗ ಮನೆಯಲ್ಲಿ ಸೇರಿಕೊಳ್ಳುತ್ತಿದ್ದರು. ಕಳೆದ ನಾಲ್ಕು ವರ್ಷಗಳಿಂದ ಭಾರತಿ-ಸುಮಿತ್ರಾ ಸಲಿಂಗ ಕಾಮಿಗಳಾಗಿದ್ದರು. ಇಬ್ಬರು ಮಾತನಾಡಿಕೊಳ್ಳೋಕೆ ಬೇರೆ ಮೊಬೈಲ್ ಕೂಡ ಇಟ್ಟುಕೊಂಡಿದ್ದರು. ಸ್ನಾನ ಮಾಡುವಾಗ ನಗ್ನವಾಗಿ ವೀಡಿಯೋ ಕಾಲ್ ಮಾಡೋದು, ಇಬ್ಬರು ಕಿಸ್ ಮಾಡುತ್ತ ಪೋಟೋ ಕೂಡ ಕ್ಲಿಕ್ಲಿಸಿಕೊಂಡಿದ್ದರು. ಭಾರತಿ ಎದೆ ಮೇಲೆ ‘ಸುಮಿ’ ಎಂದು ಟ್ಯಾಟೂ ಹಾಕಿಸಿಕೊಂಡಿದ್ದಳು. ಅಲ್ಲದೇ ಇಬ್ಬರೂ ಫೋಟೋಗಳನ್ನ ಹಾಕಿ ರೀಲ್ಸ್ ವಿಡಿಯೋ ಕೂಡ ಮಾಡಿದ್ದರು.
ಕಳೆದ ಐದು ತಿಂಗಳ ಹಿಂದೆಯಷ್ಟೇ ಭಾರತಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಮಗು ಆದಾಗಿನಿಂದ ಭಾರತಿ ತನ್ನನ್ನ ಅವೈಡ್ ಮಾಡುತ್ತಿದ್ದಾಳೆ ಎಂದು ಸುಮಿತ್ರಾ ಅಂದುಕೊಂಡಿದ್ದಳು. ಈ ವಿಚಾರವಾಗಿ ಇಬ್ಬರ ಮಧ್ಯೆ ಪದೇ ಪದೇ ಜಗಳವಾಗುತ್ತಿತ್ತು. ಮಗುವಿನಿಂದಲೇ ಈ ಗಲಾಟೆ ಆಗುತ್ತಿದೆ ಎಂದು ಮಗುವನ್ನ ಕೊಲೆ ಮಾಡುವಂತೆ ಸುಮಿತ್ರಾ ಭಾರತಿಗೆ ತಿಳಿಸಿದ್ದಳು. ಅದರಂತೆ ಭಾರತಿ ತನ್ನ ಮಗುವನ್ನ ಉಸಿರುಗಟ್ಟಿಸಿ ಕೊಲೆ ಮಾಡಿ ಬಳಿಕ ಹಾಲು ಕುಡಿಯುವಾಗ ನೆತ್ತಿಗೇರಿ ಸಾವನ್ನಪ್ಪಿದೆ ಎಂದು ಕಥೆಕಟ್ಟಿದ್ದಳು. ಇದನ್ನೇ ನಿಜ ಎಂದು ತಿಳಿದ ಕುಟುಂಬಸ್ಥರು ಮಗುವಿನ ಅಂತ್ಯಸಂಸ್ಕಾರ ಮಾಡಿ ಮುಗಿಸಿದ್ದರು.
ಕೆಳಮಂಗಲಂ ತಹಶೀಲ್ದಾರ್ ಗಂಗೈರವರ ಸಮ್ಮುಖದಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಅಂತ್ಯಸಂಸ್ಕಾರ ಮಾಡಿದ್ದ ಗುಂಡಿಯಿಂದ ಮಗುವಿನ ಮೃತದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸದ್ಯ ಇಬ್ಬರು ಸಲಿಂಗ ಕಾಮಿಗಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ : ರಾಯಚೂರಿನಲ್ಲಿ KSRTC ಬಸ್ ಹರಿದು ಬಾಲಕ ಸ್ಥಳದಲ್ಲೇ ಸಾವು



















