ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ತಮ್ಮ ಮನೆಯೊಂದನ್ನು ಮಾರಾಟ ಮಾಡಿ ಸುದ್ದಿಯಾಗಿದ್ದಾರೆ. ಮುಂಬೈನ ಅತ್ಯಂತ ಪ್ರತಿಷ್ಠಿತ ಪ್ರದೇಶವಾಗಿರುವ ಶಿವ್ ಅಸ್ಥಾನಾ ಹೈಟ್ಸ್ ನಲ್ಲಿದ್ದ ತಮ್ಮ ಪ್ಲ್ಯಾಟನ್ನ ಸಲ್ಮಾನ್, ಬರೋಬ್ಬರಿ 5.35 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ. ಇಲ್ಲಿಯವರೆಗೂ ಲೀಸ್ ಗೆ ನೀಡಿದ್ದ ಈ ಮನೆಯಿಂದ ಸಲ್ಮಾನ್ ತಿಂಗಳಿಗೆ 90 ಲಕ್ಷ ಗಳಿಸುತ್ತಿದ್ದರು. ಹೀಗಿದ್ದರೂ ಈ ಪ್ಲ್ಯಾಟ್ ಮಾರಾಟದ ನಿರ್ಧಾರವನ್ನು ಸಲ್ಮಾನ್ ದಿಢೀರ್ ಅಂತಾ ಕೈಗೊಂಡಿರೋದು ಅಚ್ಚರಿ ಮೂಡಿಸಿದೆ.



















