ಬಾಲಿವುಡ್ ಸಿಕಂದರ್ ಸಿನಿಮಾ ಸೋಲಿನ ನಂತರ ಸಲ್ಮಾನ್ ಖಾನ್ ಇದೀಗ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಪೊಲೀಸ್ ಆಫೀಸರ್ ಪಾತ್ರದಲ್ಲಿ ಸಲ್ಮಾನ್ ಖಾನ್ ಮಿಂಚಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ.
ಸಲ್ಮಾನ್ ಖಾನ್ ಮೈಕಟ್ಟು ಈಗಿನ ಯುವತಿಯರಿಗೆ ಫೇವ್ರೆಟ್ ಆಗಿದ್ದು, ಜಿಮ್ ಬಾಡಿಗೆ ಯುವತಿಯರು ಫಿದಾ ಆಗಿದ್ದಾರೆ. ಇದರಿಂದ ಸಲ್ಮಾನ್ ಸಿನಿಮಾಗಳೆಂದರೆ ಬಹುತೇಕ ಯುವತಿಯರಿಗೆ ಇಷ್ಟವಾಗುತ್ತದೆ. ಸಿಕಂದರ್ ಸಿನಿಮಾದ ಸೋಲಿನಿಂದ ಬೇಸತ್ತಿರುವ ಸಲ್ಮಾನ್ ಖಾನ್ ಕೊಂಚ ಬೇಸರಗೊಂಡಿದ್ದರು.
ಸಿಕಂದರ್’ ನಟಿ ರಶ್ಮಿಕಾ ಮಂದಣ್ಣ ಮತ್ತು ಸಲ್ಮಾನ್ ಖಾನ್ ಮಧ್ಯೆ ಬರೋಬ್ಬರಿ 31 ವರ್ಷ ವಯಸ್ಸಿನ ಅಂತರ ಇದೆ ಎಂದು ಟ್ರೋಲ್ ಕೂಡ ಆಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ನಟ ಸಲ್ಮಾನ್ ಖಾನ್ ನನಗೂ ರಶ್ಮಿಕಾಗೂ 31 ವರ್ಷ ವ್ಯತ್ಯಾಸ ಇದೆ ಎಂದು ಹೇಳುತ್ತಿದ್ದಾರೆ. ಇದರಿಂದ ನಟಿ ರಶ್ಮಿಕಾಗೆ ಆಗಲಿ, ಅವರ ತಂದೆಗೆ ಆಗಲಿ ಸಮಸ್ಯೆಯಾಗಿಲ್ಲ. ನಿಮಗೆ ಏಕೆ ಸಮಸ್ಯೆ ಎಂದು ಪಂಚ್ ಕೊಟ್ಟಿದ್ದಾರೆ,.
ಆರ್ಮಿ ಆಫೀಸರ್ ಮತ್ತು ಸೇನೆ ಸುತ್ತ ರಚಿಸಿರುವ ಕಥೆ ಸಲ್ಮಾನ್ಗೆ ಇಷ್ಟವಾಗಿ, ಕಥೆಗೆ ಒಪ್ಪಿಗೆ ನೀಡಿದ್ದಾರೆ. ಈ ಸಿನಿಮಾ ಸೂಪರ್ ಹಿಟ್ ಆಗುವ ಎಲ್ಲಾ ಲಕ್ಷಣ ಇದೆ ಎಂದು ಸಲ್ಮಾನ್ ಖಾನ್ ಅಂದುಕೊಂಡಿದ್ದು, ಇಂಡಿಯಾಸ್ ಮೋಸ್ಟ್ ಫಿಯರ್ಲೆಸ್ 3’ ಕಾದಂಬರಿ ಆಧರಿಸಿ ಸಿನಿಮಾ ಮಾಡಲು ನಿರ್ದೇಶಕ ತಯಾರು ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮುಂದೆ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸುತ್ತಾ ಎನ್ನುವುದನ್ನು ಕಾದುನೋಡಬೇಕು.