ನಟ ಅಲ್ಲು ಅರ್ಜುನ್ ನಟನೆಯ ಪುಷ್ಪ 2 ಬಿಡುಗಡೆಗೂ ಮುನ್ನವೇ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಈ ನಿರೀಕ್ಷೆಗೆ ಈಗ ಒಂದೊಂದೇ ಜಯ ಸಿಗುವಂತಾಗುತ್ತಿದೆ.
ಬಿಡುಗಡೆಗೂ ಮುನ್ನವೇ ಪುಷ್ಪ 2 ದಾಖಲೆಯೊಂದನ್ನು ಬರೆದಿದೆ. ಹೀಗಾಗಿ ಈ ಚಿತ್ರದಿಂದ ಮುಂದೆ ಅದೆಷ್ಟು ದಾಖಲೆಗಳು ನಿರ್ಮಾಣವಾಗಲಿವೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಹಿಂದಿನ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆಯ ಮೇಲೆ ‘ಪುಷ್ಪ 2’ ಕಣ್ಣಿಟ್ಟಿದೆ. ಭಾರತೀಯ ಸಿನಿಮಾಗಳಿಗೆ, ವಿಶೇಷವಾಗಿ ತೆಲುಗು ಸಿನಿಮಾಗಳಿಗೆ ಭಾರತ ಬಿಟ್ಟರೆ ಅಮೆರಿಕ ಅತಿ ದೊಡ್ಡ ಮಾರುಕಟ್ಟೆ. ಅಮೆರಿಕದಲ್ಲಿ ತೆಲುಗು ಸಿನಿಮಾಗಳಿಗೆ ಸಾಕಷ್ಟು ಬೇಡಿಕೆ ಇದೆ. ಹೀಗಾಗಿ ಅಮೆರಿಕದಲ್ಲಿ ‘ಪುಷ್ಪ 2’ ಬಾಕ್ಸ್ ಆಫೀಸ್ ದೋಚಲು ಸಜ್ಜಾಗಿದೆ.
ಭಾರತಕ್ಕೆ ಹೋಲಿಸಿದರೆ ಅಮೆರಿಕದಲ್ಲಿ ಪ್ರೀ ಬುಕಿಂಗ್ ಬೇಗನೆ ಪ್ರಾರಂಭ ಆಗುತ್ತದೆ. ಈ ಹಿಂದಿನ ಯಾವುದೇ ಸಿನಿಮಾಕ್ಕೆ ಸಿಗದಷ್ಟು ಪ್ರೀ ಬುಕಿಂಗ್ ಅತ್ಯಂತ ಕಡಿಮೆ ಅವಧಿಯಲ್ಲಿ ‘ಪುಷ್ಪ 2’ ಸಿನಿಮಾಕ್ಕೆ ದೊರೆತಿದೆ. ‘ಪುಷ್ಪ 2’ ಸಿನಿಮಾ ಅತ್ಯಂತ ವೇಗವಾಗಿ ಒಂದು ಮಿಲಿಯನ್ ಡಾಲರ್ (8.43 ಕೋಟಿ) ಹಣದಷ್ಟು ಪ್ರಿ ಬುಕ್ಕಿಂಗ್ ಟಿಕೆಟ್ ಸೇಲ್ ಮಾಡಿದೆ. ಹೀಗೆ ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಗಳಿಸಿದ ಭಾರತೀಯ ಮೊದಲ ಸಿನಿಮಾ ಪುಷ್ಪ 2 ಆಗಿದೆ. ವನ್ನು ಕೇವಲ ಪ್ರೀ ಬುಕಿಂಗ್ನಲ್ಲಿ ಗಳಿಸಿದ ಮೊದಲ ಭಾರತೀಯ ಸಿನಿಮಾ ಎನಿಸಿಕೊಂಡಿದೆ.
ತೆಲುಗಿನ ಬ್ಲಾಕ್ ಬಸ್ಟರ್ ಸಿನಿಮಾಗಳಾದ ‘ಆರ್ಆರ್ಆರ್’, ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’, ಇತ್ತೀಚೆಗಿನ ಹಿಂದಿ ಬ್ಲಾಕ್ ಬಸ್ಟರ್, ‘ಸ್ತ್ರೀ 2’, ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾಗಳಿಗೆ ಇಷ್ಟೊಂದು ಪ್ರಮಾಣದಲ್ಲಿ ಬುಕ್ಕಿಂಗ್ ಆಗಿರಲಿಲ್ಲ. ‘ಪುಷ್ಪ 2’ ಸಿನಿಮಾ ಕೆಲವೇ ಗಂಟೆಗಳಲ್ಲಿ ಒಂದು ಮಿಲಿಯನ್ ಡಾಲರ್ ಗಡಿ ದಾಟಿದೆ. ಹೀಗಾಗಿ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಕಲೆಕ್ಷನ್ ಮಾಡುವುದರ ಮೇಲೆ ಕಣ್ಣಿಟ್ಟಿದೆ.
ಅಮೆರಿಕದಲ್ಲಿ ಅತ್ಯಂತ ವೇಗವಾಗಿ ಒಂದು ಮಿಲಿಯನ್ ಗಳಿಸಿದ ದಾಖಲೆಯ ವಿಷಯವನ್ನು ಸಿನಿಮಾದ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಹಂಚಿಕೊಂಡಿದೆ. ‘ಮತ್ತೊಂದು ದಿನ, ಮತ್ತೊಂದು ದಾಖಲೆ, ಇತಿಹಾಸದ ಪುಟಗಳಿಗೆ ಮತ್ತೊಂದು ಅಧ್ಯಾಯ ಸೇರ್ಪಡೆ’ ಎಂದು ಮೈತ್ರಿ ಮೂವಿ ಮೇಕರ್ಸ್ ಬರೆದುಕೊಂಡಿದ್ದಾರೆ.