ದುಬೈ: ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಇದೀಗ ಮತ್ತೊಂದು ದಾಖಲೆ ಬರೆದಿದ್ದಾರೆ. ಅವರು ಏಕದಿನ ಕ್ರಿಕೆಟ್‌ನಲ್ಲಿ 11000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಮಾಸ್ಟರ್-ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 11000 ರನ್‌ಗಳನ್ನು ಪೂರ್ಣಗೊಳಿಸಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಅದಕ್ಕಾಗಿ ರೋಹಿತ್ ಒಟ್ಟು 261 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ. ಇನ್ನು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ 276 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ.
ರಾಟ್ ಕೊಹ್ಲಿ 297 ಏಕದಿನ ಪಂದ್ಯಗಳಿಂದ 13,963 ರನ್‌ಗಳನ್ನು ಗಳಿಸಿದ್ದಾರೆ. ಇವರು ತಮ್ಮ 230ನೇ ಪಂದ್ಯ ಹಾಗೂ 222 ಇನಿಂಗ್ಸ್‌ಗಳಿಂದ 11,000 ರನ್‌ಗಳನ್ನು ಗಳಿಸಿದ್ದರು. ಆ ಮೂಲಕ ವೇಗವಾಗಿ ಈ ಸಾಧನೆ ಮಾಡಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಇವರು 2019ರ ಜೂನ್ 16 ರಂದು ಮ್ಯಾಂಚೆಸ್ಟರ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಈ ಮೊತ್ತ ದಾಖಲಿಸಿದ್ದರು. ಅಂದ ಹಾಗೆ ಮೊದಲ ಮೂರು ಸ್ಥಾನಗಳು ಭಾರತೀಯ ಬ್ಯಾಟ್ಸ್‌ಮನ್‌ಗಳ ಹೆಸರಲ್ಲೇ ಇರುವುದು ವಿಶೇಷ.
ಒಡಿಐನಲ್ಲಿ 11,000 ರನ್‌ಗಳನ್ನು ಗಳಿಸಿದ ಭಾರತದ 4ನೇ ಹಾಗೂ ವಿಶ್ವದ 10ನೇ ಬ್ಯಾಟರ್ ರೋಹಿತ್ ಶರ್ಮಾ. 50 ಓವರ್‌ಗಳ ಐಸಿಸಿ ಟೂರ್ನಿಗಳಲ್ಲಿ ರೋಹಿತ್ ಶರ್ಮಾ ಬಾಂಗ್ಲಾದೇಶ ಎದುರು ನಾಲ್ಕು ಪಂದ್ಯಗಳನ್ನು ಆಡಿದ್ದು, ಮೂರು ಶತಕಗಳನ್ನು ಸಿಡಿಸಿದ್ದಾರೆ. ಆದರೆ, ಗುರುವಾರದ ಪಂದ್ಯದಲ್ಲಿ 41 ರನ್ಗಳಿಗೆ ಔಟಾದರು.
ವೇಗವಾಗಿ 11,000 ಒಡಿಐ ರನ್‌ಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳು
ವಿರಾಟ್ ಕೊಹ್ಲಿ (ಭಾರತ) – 222 ಇನಿಂಗ್ಸ್‌ಗಳು
ರೋಹಿತ್ ಶರ್ಮಾ (ಭಾರತ) – 261 ಇನಿಂಗ್ಸ್‌ಗಳು
ಸಚಿನ್ ತೆಂಡೂಲ್ಕರ್ (ಭಾರತ) – 276 ಇನಿಂಗ್ಸ್‌ಗಳು
ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) – 286 ಇನಿಂಗ್ಸ್‌ಗಳು
ಸೌರವ್ ಗಂಗೂಲಿ (ಭಾರತ) – 288 ಇನಿಂಗ್ಸ್‌ಗಳು
ಜಾಕ್ ಕಾಲಿಸ್ (ದಕ್ಷಿಣ ಆಫ್ರಿಕಾ) – 293 ಇನಿಂಗ್ಸ್‌ಗಳು
ಅತಿ ಹೆಚ್ಚು ರನ್ ಗಳಿಸಿದ ಅಗ್ರ 10 ಬ್ಯಾಟ್ಸ್‌ಮನ್‌ಗಳು
ಸಚಿನ್ ತೆಂಡೂಲ್ಕರ್ – 18,426
ಕುಮಾರ್ ಸಂಗಕ್ಕಾರ – 14,234
ವಿರಾಟ್ ಕೊಹ್ಲಿ – 13,962
ರಿಕಿ ಪಾಂಟಿಂಗ್ – 13,704
ಸನತ್ ಜಯಸೂರ್ಯ – 13,430