ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆಗಳೆಲ್ಲ ನದಿಗಳಂತಾಗಿವೆ. ಬಿಎಂಟಿಸಿ ಬಸ್ ರಸ್ತೆ ಮಧ್ಯೆಯೇ ಕೆಟ್ಟು ನಿಂತಿರುವ ಘಟನೆ ನಡೆದಿದೆ.
ರಸ್ತೆಗಳೆಲ್ಲ ನದಿಗಳಂತಾಗಿರುವುದರಿಂದಾಗಿ ಬಸ್ ಗಳನ್ನು ಬಿಎಂಟಿಸಿ ರಸ್ತೆಗೆ ಇಳಿಸುತ್ತಿಲ್ಲ. ಮಳೆಯಿಂದಾಗಿ ಇಲ್ಲಿಯವರೆಗೆ 250 ರೂಟ್ಸ್ ಗಳನ್ನು ರದ್ದು ಮಾಡಲಾಗಿದೆ. ಬಸ್ ರಸ್ತೆಗೆ ಇಳಿಯದ ಹಿನ್ನೆಲೆಯಲ್ಲಿ ಪ್ರಯಾಣಿಕರು ಬಸ್ ಗಳಿಲ್ಲದೆ ಪರದಾಟ ನಡೆಸುವಂತಾಗಿದೆ.