ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಅವರನ್ನು ಬಿಜೆಪಿಯಿಂದ ಉಚ್ಛಾಟಿಸಲಾಗಿದೆ. ಆದರೂ ರೆಬೆಲ್ಸ್ ತಂಡದ ನೆಂಟನ್ನು ಅವರು ಬಿಟ್ಟಿಲ್ಲ. ಈಗ ಮತ್ತೆ ರೆಬೆಲ್ಸ್ ಆಕ್ಟೀವ್ ಆಗಿದೆ. ಉಚ್ಚಾಟನೆ ಬಳಿಕವೂ ಒಟ್ಟಾಗಿ ರೆಬೆಲ್ಸ್ ತಂಡ ಕಾಣಿಸಿಕೊಳ್ಳುತ್ತಿದೆ.
ಶುಕ್ರವಾರ ರಾತ್ರಿ ಶಾಸಕ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೆರಳಿದ್ದರು. ಈ ವೇಳೆ ಗೋಕಾಕ್ ಗ್ರಾಮದೇವತೆ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿದ್ದರು. ಶಾಸಕ ರಮೇಶ್ ಜಾರಕಿಹೊಳಿ ಅವರೊಂದಿಗೆ ಮಹಾಲಕ್ಷ್ಮಿ ದೇವಿ, ದುರ್ಗಾದೇವಿ ಮತ್ತು ದ್ಯಾಮವ್ವ ದೇವಿ ದರ್ಶನ ಪಡೆದರು. ದೇವಸ್ಥಾನದಲ್ಲಿ ಇಬ್ಬರೂ ನಾಯಕರು ವಿಶೇಷ ಪೂಜೆ ನೆರವೇರಿಸಿದರು.