ಭಾರತ ತಂಡದ ಅನುಭವಿ ಆಟಗಾರ ಹಾಗೂ ಕನ್ನಡಿಗ ಕೆ.ಎಲ್. ರಾಹುಲ್ ಇತ್ತೀಚೆಗೆ ತಮ್ಮ ಲಯ ಕಂಡುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ನಡೆದ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಅವರು ವಿಫಲರಾಗಿದ್ದರು. ಹೀಗಾಗಿ ಎರಡು ಪಂದ್ಯದಿಂದ ಅವರನ್ನು ಹೊರಗೆ ಇಡಲಾಗಿತ್ತು. ಆನಂತರ ಆಸ್ಟ್ರೇಲಿಯಾ ಎ ವಿರುದ್ಧ ಕೂಡ ವಿಫಲರಾಗಿದ್ದರು. ಈ ಮಧ್ಯೆ ಅವರು ಮಾತನಾಡಿದ್ದು, ಸ್ವಾತಂತ್ರ್ಯದ ಬಗ್ಗೆ ಹೇಳಿದ್ದಾರೆ.
ಈಗಾಗಲೇ ರಾಹುಲ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ಕಳೆದ ಬಾರಿಯ ನಾಯಕನನ್ನು ರಿಲೀಸ್ ಮಾಡಿ ಹರಾಜಿನ ಅಂಗಳಕ್ಕೆ ಕಳುಹಿಸಿದೆ. ಈ ವೇಳೆ ಮಾತನಾಡಿರುವ ರಾಹುಲ್, ನಾನು ಹೊಸ ತಂಡವನ್ನು ಸೇರಲು ಉತ್ಸುಕನಾಗಿದ್ದೇನೆ. ಯಾವ ತಂಡಕ್ಕೆ ಹೋಗುತ್ತೇನೆ ಎಂಬುವುದನ್ನು ನಾನು ಕೂಡ ಕಾತುರದಿಂದ ಕಾಯ್ದು ನೋಡುತ್ತಿದ್ದೇನೆ. ನಾನು ಎಲ್ಲಿಯೇ ಹೋದರೂ ನನಗೆ ಅಲ್ಲಿ ಸ್ವಾತಂತ್ರ್ಯ ಬೇಕು. ತಂಡದ ವಾತಾವರಣ ತಿಳಿಯಾಗಿರಲಿ. ಕೊಂಚ ದೂರ ಹೋದ ಮೇಲೆ ಒಳ್ಳೆಯದನ್ನು ಹುಡುಕಲು ಮನಸ್ಸು ಬಯಸುತ್ತದೆ ಎಂದು ರಾಹುಲ್ ತಿಳಿಸಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ರಾಹುಲ್ ಎಲ್‌ಎಸ್‌ಜಿ ತಂಡವನ್ನು ಬಿಟ್ಟ ಬಗ್ಗೆ ತುಟಿ ಬಿಚ್ಚಿದ್ದಾರೆ. ನಾನು ಹೊಸ ತಂಡವನ್ನು ಸೇರಲು ಉತ್ಸುಕನಾಗಿದ್ದೇನೆ. ನಾನು ಯಾವ ತಂಡಕ್ಕೆ ಹೋಗುತ್ತೇನೆ ಎಂಬುದನ್ನು ಕಾತುರದಿಂದ ಕಾಯುತ್ತಿದ್ದೇನೆ. ನಾನು ಎಲ್ಲಿಯೇ ಹೋದರೂ ನನಗೆ ಅಲ್ಲಿ ಸ್ವಾತಂತ್ರ್ಯ ಬೇಕು. ತಂಡದ ವಾತಾವರಣ ತಿಳಿಯಾಗಿರಲಿ. ಕೊಂಚ ದೂರ ಹೋದ ಮೇಲೆ ಒಳ್ಳೆಯದನ್ನು ಹುಡುಕುತ್ತೇನೆ. ಆಟಗಾರನಾಗಿ ನಾನು ಸದ್ಯ ಎಲ್ಲಿದ್ದೇನೆ ಎಂಬ ಅರಿವಿದೆ. ಕಂ ಬ್ಯಾಕ್ ಮಾಡಬೇಕೆಂಬುವುದೂ ನನಗೆ ತಿಳಿದಿದೆ. ಹೀಗಾಗಿ ನಾನು ಐಪಿಎಲ್ ಆವೃತ್ತಿಗಾಗಿ ಎದುರು ನೋಡುತ್ತಿದ್ದೇನೆ. ಭಾರತ ಟಿ20 ತಂಡಕ್ಕೆ ಕಂ ಬ್ಯಾಕ್ ಮಾಡುವುದೇ ನನ್ನ ಗುರಿ ಎಂದು ಹೇಳಿದ್ದಾರೆ.