ಬೆಂಗಳೂರು : ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. 42ನೇ ಎಸಿಜೆಎಂ ಕೋರ್ಟ್ನಿಂದ ಅರೆಸ್ಟ್ ವಾರೆಂಟ್ ಜಾರಿ ಹಿನ್ನೆಲೆ ಬಸವೇಶ್ವರನಗರ ಪೊಲೀಸರು ವಾಟಾಳ್ ನಾಗರಾಜ್ ಅವರನ್ನು ಇಂದು ಅರೆಸ್ಟ್ ಮಾಡಿದ್ದಾರೆ.
2021ರಲ್ಲಿ ವಾಟಾಳ್ ನಾಗರಾಜ್ ಅವರು ಶಾಸಕ ಸುರೇಶ್ ಕುಮಾರ್ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ಪ್ರಕರಣ ಸಂಬಂಧ, 42ನೇ ಎಸಿಜೆಎಂ ವಾಟಾಳ್ ನಾಗರಾಜ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ ಮಾಡಿದ ಹಿನ್ನೆಲೆ ಬಂಧಿಸಲಾಗಿದೆ.
ಇನ್ನು, ಬಂಧನದ ವೇಳೆ ವಾಟಾಳ್ ನಾಗರಾಜ್ ಅವರು ಇಂಗ್ಲಿಷ್‌ನಲ್ಲಿ ವಾರೆಂಟ್ ತಂದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕನ್ನಡದಲ್ಲಿ ವಾರೆಂಟ್ ಕೊಟ್ಟರೆ ಮಾತ್ರ ಬರುತ್ತೇನೆ, ಇಲ್ಲ ಅಂದರೆ ಬರುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಅಲ್ಲದೆ, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪೊಲೀಸ್ ವಾಹನ ಹತ್ತಲು ನಿರಾಕರಿಸಿದ್ದಾರೆ. ಕೊನೆಗೆ ಪೊಲೀಸರು ವಾಟಾಳ್ ನಾಗರಾಜ್ ಅವರನ್ನು ಆಟೋದಲ್ಲಿ ಕೋರ್ಟ್‌ಗೆ ಕರೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ : ಮಳೆಯಿಂದ ರಕ್ಷಣೆ ಪಡೆಯಲು ಹೋದ ಬಾಲಕಿ ಮೇಲೆ ಕಾರ್ಮಿಕರಿಂದ ಅತ್ಯಾಚಾರ : ಉ.ಪ್ರದೇಶದಲ್ಲಿ ಹೇಯ ಕೃತ್ಯ!


















