ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವುದು ಮತ್ತು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಅಭಿಯಾನದ ಕುರಿತು ಸಿಎಂ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಸಾರಥ್ಯದಲ್ಲಿ ಮಹತ್ವದ ಸಭೆ ನಡೆಯಲಿದ್ದು, 209 ಶಾಲೆಗಳ ಆಡಳಿತ ಮಂಡಳಿಗಳು ಭಾಗಿಯಾಗುವ ಸಾಧ್ಯತೆಯಿದೆ. ಆದರೆ, ಈ ಯೋಜನೆಗೆ ಖಾಸಗಿ ಶಾಲಾ ಸಂಘಟನೆ ಕೆಆರ್ ಯುಪಿಎ ವಿರೋಧ ವ್ಯಕ್ತಪಡಿಸಿದೆ.
ಈಗಾಗಲೇ ನಿಯಮಗಳು, ನವೀಕರಣ ಸಮಸ್ಯೆ, ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ಹಾಗೂ ಆರ್ಟಿಐ ಶುಲ್ಕ ವಿನಾಯಿತಿ ಇಲ್ಲದೆ ಖಾಸಗಿ ಶಾಲೆಗಳು ಸಂಕಷ್ಟದಲ್ಲಿವೆ ಎಂದು ಆಡಳಿತ ಮಂಡಳಿಗಳು ಅಳಲು ತೋಡಿಕೊಂಡಿವೆ.


















