56 ವರ್ಷಗಳ ನಂತರ ಭಾರತದ ಪ್ರಧಾನಿ ಗಯಾನಾಗೆ ಭೇಟಿ ನೀಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ಸಾಧನೆ ಮಾಡುತ್ತಿದ್ದಾರೆ. ಮೋದಿ ಅವರು ನ. 19ರಿಂದ 21ರ ವರೆಗೆ ಗಯಾನಾಕ್ಕೆ ಭೇಟಿ ನೀಡುತ್ತಿದ್ದಾರೆ.
ಈ ಭೇಟಿ ಎರಡು ದೇಶಗಳ ಮಧ್ಯೆ ಬಲವಾದ ಬಾಂಧವ್ಯ ಪ್ರತಿಬಿಂಬಿಸುತ್ತಿದೆ. ಗಯಾನಾದೊಂದಿಗಿನ ಮಾತುಕತೆ ಕೆರಿಬಿಯನ್ ಸಮುದಾಯದಲ್ಲಿ (CARICOM) ತನ್ನ ಪ್ರಭಾವವನ್ನು ವಿಸ್ತರಿಸುವ ಭಾರತದ ಬದ್ಧತೆಗೆ ಇದು ಬೆಂಬಲವಾಗಿ ನಿಲ್ಲುತ್ತದೆ. ಈ ಎಲ್ಲ ವಿಚಾರಗಳ ಕುರಿತು ಪ್ರಧಾನಿ ಮೋದಿ ಅವರು ಅಧ್ಯಕ್ಷ ಅಲಿ ಅವರೊಂದಿಗೆ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ.
ಅಲ್ಲದೇ, ಇಂಧನ, ರಕ್ಷಣೆ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರದ ಕುರಿತು ಚರ್ಚಿಸಲಾಗುವುದು. ಜಾರ್ಜ್‌ಟೌನ್‌ನಲ್ಲಿ ನಡೆಯಲಿರುವ ಎರಡನೇ ಭಾರತ-ಕ್ಯಾರಿಕಾಮ್ ಶೃಂಗಸಭೆ ಇದಾಗಿದೆ.
ಗಯಾನಾ ಸಂಸತ್ತಿನ ರಾಷ್ಟ್ರೀಯ ಅಸೆಂಬ್ಲಿಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಇದು ಉಭಯ ದೇಶಗಳ ನಡುವಿನ ಪ್ರಜಾಸತ್ತಾತ್ಮಕ ಬಾಂಧವ್ಯದ ಸಂಕೇತವಾಗಿರಲಿದೆ. ಇತ್ತೀಚೆಗೆ ಪ್ರಾದೇಶಿಕ ಭದ್ರತಾ ಸಹಕಾರವನ್ನು ಬಲಪಡಿಸಲು ಗಯಾನಾದ ರಕ್ಷಣಾ ಸಾಮರ್ಥ್ಯಗಳಿಗೆ ಭಾರತವು ಗಮನಾರ್ಹ ಕೊಡುಗೆ ನೀಡಿದೆ.