ಉಗ್ರರನ್ನೇ ಟಾರ್ಗೆಟ್ ಮಾಡಿ ಭಾರತವೀಗ ಆಪರೇಷನ್ ಸಿಂಧೂರ ಸಮರ ಸಾರಿದೆ. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರಗಳಲ್ಲಿ ಜಿಹಾದಿಗಳ ನೆತ್ತರೋಕುಳಿ ಆಡಲಾಗಿದೆ.
ಲಷ್ಕರ್ ಮತ್ತು ಜೈಶ್ ನ ಮೋಸ್ಟ್ ವಾಂಟೆಡ್ ಉಗ್ರರ ಕ್ಯಾಂಪ್ ಗಳು, ಅಡಗುದಾಣಗಳು ಸೇರಿದಂತೆ ತರಬೇತಿ ಕೇಂದ್ರಗಳಲ್ಲಾ ಉಡೀಸ್ ಆಗಿವೆ. ಈ ದಾಳಿಯಲ್ಲಿ ಅತ್ಯುಗ್ರ ಹಫೀಜ್ ಸಯೀದ್, ಮೌಲಾನಾ ಮತ್ತು ಮಸೂದ್ ಸಯೀದ್ ಹತರಾಗಿದ್ದಾರಾ ಅನ್ನೋದಿನ್ನೂ ಅಸ್ಪಷ್ಟ. ಆದ್ರೆ 100ಕ್ಕೂ ಹೆಚ್ಚು ಧರ್ಮಾಂಧರಿಗೆ ಗೋರಿ ಕಟ್ಟಿರೋದಂತೂ ಸ್ಪಷ್ಟ. ಆದ್ರೆ ಈ ವಿಚಾರದಲ್ಲಿ ತೆಪ್ಪಗಿರೋ ಪಾಕ್ ಯಾವಾಗ ತನ್ನ ಬಾಲ ಬಿಚ್ಚುತ್ತೋ ಗೊತ್ತಿಲ್ಲ. ಹೀಗಾಗಿಯೇ ಭಾರತದ ಮೂರು ಸೇನೆಗಳೂ ಹೈ ಅಲರ್ಟ್ ನಲ್ಲಿವೆ.
ಒಂದೊಮ್ಮೆ ಭಾರತದ ಆಪರೇಷನ್ ಸಿಂಧೂರಕ್ಕೆ ಪಾಕ್ ಪ್ರತ್ಯುತ್ತರದ ಕ್ರಮಕ್ಕೆ ಮುಂದಾದ್ರೆ ಉಳಿಗಾಲವಿಲ್ಲದಂತೆ ಚೆಚ್ಚಿ ಕೆಡವಲು ಸೇನೆಸಿ ದ್ಧವಾಗಿದೆ. ಈ ನಿಟ್ಟಿನಲ್ಲೇ ಆಪರೇಷನ್ ಸಿಂಧೂರ ಪಾರ್ಟ್ 2ಗೆ ಸಕಲ ಸಿದ್ಧತೆ ಮಾಡಿಕೊಂಡಿರೋ ಸೇನೆ ಗಡಿಯಲ್ಲಿ ಹದ್ದಿನ ಕಣ್ಣಿಟ್ಟು ಕುಳಿತಿದೆ. ಪಾಕ್ ಕಿರಿಕ್ ತೆಗೆದ್ರೆ ಹೆಡೆಮುರಿ ಕಟ್ಟೋಕೆ ಟೊಂಕಕಟ್ಟಿ ನಿಂತಿದೆ.



















