ತೆಹ್ರಾನ್: ಹಿಜಾಬ್ ಧರಿಸಿಲ್ಲ ಎಂಬ ಕಾರಣಕ್ಕೆ ಯುವತಿಗೆ ಪೊಲೀಸರು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಕಳೆದ ವರ್ಷವಷ್ಟೇ ಹಿಜಾಬ್ ವಿರೋಧಿಸಿ ಬಂಧನಕ್ಕೊಳಗಾಗಿ ಪೊಲೀಸ್ ಕಸ್ಟಡಿಯಲ್ಲೇ ಸಾವನ್ನಪ್ಪಿದ್ದ ಮಹ್ಶಾ ಅಮಿನಿ ಪ್ರಕರಣ ಮಾಸುವ ಮುನ್ನವೇ ಇರಾನ್ ನಲ್ಲಿ ಮತ್ತೆ ಅಂತಹ ಘಟನೆಯೊಂದು ವರದಿಯಾಗಿದೆ.
ವಾಹನ ಚಾಲನೆಯಲ್ಲಿದ್ದ 31 ವರ್ಷದ ಇರಾನ್ ಮಹಿಳೆ ಅರಿಝೋ ಬದ್ರಿ ಸರಿಯಾಗಿ ಹಿಜಾಬ್ ಧರಿಸಿಲ್ಲ ಎಂದು ಪೊಲೀಸರು ಗುಂಡಿಕ್ಕಿದ್ದಾರೆ. ಕಡ್ಡಾಯವಾದ ಕಠಿಣ ಹಿಜಾಬ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಗುಂಡಿನ ದಾಳಿ ನಡೆಸಲಾಗಿದೆ. ಘಟನೆ ನಡೆಯುವ ಸಂದರ್ಭದಲ್ಲಿ ಆ ಮಹಿಳೆ ತನ್ನ ಸಹೋದರಿಯೊಂದಿಗೆ ವಾಹನ ಚಾಲನೆ ಮಾಡಿಕೊಂಡು ಇರಾನ್ ನ ನೂರು ನಗರದಲ್ಲಿರುವ ತನ್ನ ಮನೆಯತ್ತ ಹೋಗುತ್ತಿದ್ದಳು ಎಂದು ತಿಳಿದು ಬಂದಿದೆ.
ಪೊಲೀಸರ ಬುಲೆಟ್ ಮಹಿಳೆಯ ಶ್ವಾಸಕೋಶ ಸೇರಿದೆ. ಜೊತೆಗೆ ಆಕೆಯ ಬೆನ್ನು ಹುರಿಗೆ ಗಂಭೀರವಾದ ಹಾನಿಯಾಗಿದೆ ಎನ್ನಲಾಗಿದೆ. ಸುಮಾರು 10 ದಿನಗಳ ನಂತರ ಮಹಿಳೆಯ ದೇಹದಿಂದ ಬುಲೆಟ್ ಹೊರತೆಗೆಯಲಾಗಿದೆ. ಸದ್ಯ ಯುವತಿ ಸಾವು -ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.
2022ರಲ್ಲಿ ಇದೇ ಇರಾನ್ ನಲ್ಲಿ ಕಡ್ಡಾಯ ಹಿಜಾಬ್ ವಿರೋಧಿಸಿ ಪ್ರತಿಭಟನೆಯಲ್ಲಿ ತೊಡಗಿದ್ದ ಮಹ್ಶಾ ಅಮಿನಿಯನ್ನು ಪೊಲೀಸರು ಬಂಧಿಸಿದ್ದರು. ಆನಂತರ ಅವರು ಲಾಕಪ್ ನಲ್ಲೇ ಸಾವನ್ನಪ್ಪಿದ್ದರು. ಆನಂತರ ಇರಾನ್ ನಲ್ಲಿ ದೊಡ್ಡ ಹೋರಾಟವೇ ನಡೆದಿತ್ತು. ಇರಾನ್ ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಇದು ವಿಶ್ವದಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಈಗ ಈರಾನ್ ನಲ್ಲಿ ಮತ್ತೆ ಅಂತಹ ಘಟನೆಯೊಂದು ವರದಿಯಾಗಿದೆ.
1979ರಲ್ಲಿ ನಡೆದ ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನ್‌ನಲ್ಲಿ ಮಹಿಳೆಯರಿಗೆ ಕಠಿಣ ಹಾಗೂ ಶಿಸ್ತುಬದ್ಧವಾದ ವಸ್ತ್ರಸಂಹಿತೆ ಇದೆ. ಮಹಿಳೆಯರಿಗಾಗಿ ಕಠಿಣ ಹಿಜಾಬ್ ಕಾನೂನು ಇದೆ. ಹಿಜಾಬ್ ಧರಿಸದಿದ್ದರೆ ಕಠಿಣವಾಗಿ ಶಿಕ್ಷಿಸಲಾಗುತ್ತದೆ.