ನವದೆಹಲಿ : ಮನೆ ಹೊರಗೆ ಆಟವಾಡುತ್ತಿದ್ದ ಬಾಲಕನೊಬ್ಬನ ಮೇಲೆ ಏಕಾಏಕಿ ಪಿಟ್ ಬುಲ್ ನಾಯಿಯೊಂದು ದಾಳಿ ಮಾಡಿದ್ದ ಘಟನೆ ದೆಹಲಿಯ ಪ್ರೇಮ್ ನಗರ ಪ್ರದೇಶದಲ್ಲಿ ನಡೆದಿದೆ.
ಪಿಟ್ ಬುಲ್ ನಾಯಿ ಇದ್ದಕ್ಕಿದ್ದಂತೆ ಪಕ್ಕದ ಮನೆಯಿಂದ ಹೊರಬಂದು ಹುಡುಗನ ಮೇಲೆ ದಾಳಿ ಮಾಡಿದ್ದ ಆಘಾತಕಾರಿ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಿಳೆಯ ಕೈಯಲ್ಲಿದ್ದ ಬೆಲ್ಟ್ ನಿಂದ ತಪ್ಪಿಸಿಕೊಂಡ ನಾಯಿ ಎದುರು ಮನೆಯ ಬಾಲಕನ ಮೇಲೆ ದಾಳಿ ಮಾಡಿದೆ. ಈ ವೇಳೆ ಮಹಿಳೆ ನಾಯಿಯನ್ನು ಹಿಡಿಯಲು ಪ್ರಯತ್ನ ಪಟ್ಟರು ಕೂಡ ಆಕೆಯ ಕೈಗೆ ನಾಯಿ ಸಿಗಲಿಲ್ಲ. ಬಾಲಕನನ್ನು ರಸ್ತೆ ತುಂಬಾ ಅಡ್ಡಾಡಿಸಿ ಕುತ್ತಿಗೆ, ಕೈ, ಕಿವಿಯ ಭಾಗಕ್ಕೆ ಕಚ್ಚಿದೆ. ಕಿವಿಯ ಭಾಗ ತೀವ್ರ ಗಾಯವಾಗಿದ್ದು ರಕ್ತಸ್ರಾವವಾಗಿದೆ.
ಕೊನೆಗೆ ಆ ಬಾಲಕನನ್ನು ನೆರೆ ಹೊರೆಯವರು ಮತ್ತು ಪೋಷಕರು ರಕ್ಷಿಸಿ ಬಿಎಸ್ಎ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಅಲ್ಲಿ ಹೆಚ್ಚಿನ ಚಿಕಿತ್ಸೆ ದೊರೆಯದ ಕಾರಣ ಸಫ್ದರ್ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪ್ರಸ್ತುತ ಆ ಬಾಲಕ ನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಆ ಮಗುವಿನ ಪೋಷಕರು ಪ್ರೇಮ್ ನಗರ ಪೊಲೀಸ್ ಠಾಣೆಯಲ್ಲಿ ನಾಯಿಯ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ : BBK 12 : ದೊಡ್ಮನೆಗೆ ಸ್ಪೆಷಲ್ ಗೆಸ್ಟ್ ಆಗಿ ಬಂದ್ರು ಸೀಸನ್ 11 ಕಂಟೆಸ್ಟೆಂಟ್ಸ್



















