ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾಗೌಡ ಅವರ ಬ್ಯಾರಕ್ ಬದಲಿಸುವಂತೆ ಕೋರಿದ್ದ ಅರ್ಜಿಯ ಆದೇಶ ಇಂದು ಪ್ರಕಟವಾಗಲಿದೆ. ಬಹುತೇಕ ಮಧ್ಯಾಹ್ನದ ನಂತರ ಸೆಷನ್ಸ್ ಕೋರ್ಟ್ ಆದೇಶ ಹೊರಡಿಸುವ ಸಾಧ್ಯತೆಯಿದೆ. ಜೈಲಿನ ಬ್ಯಾರಕ್ನಲ್ಲಿ ನೈಜೀರಿಯಾ ಮೂಲದ ಆರೋಪಿಗಳ ಕಾಟವಿದ್ದು, ಅವರು ತನ್ನ ಬಟ್ಟೆಗಳನ್ನು ಬಳಸುತ್ತಾ ಪದೇ ಪದೇ ಕಿರಿಕಿರಿ ಮಾಡುತ್ತಿದ್ದಾರೆ ಎಂದು ಆರೋಪಿ ಪವಿತ್ರಾಗೌಡ ಈ ಹಿಂದೆ ಜಡ್ಜ್ ಮುಂದೆ ಕಣ್ಣೀರು ಹಾಕಿದ್ದರು.
ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಖುದ್ದು ಬ್ಯಾರಕ್ಗೆ ಭೇಟಿ ನೀಡಬೇಕೆಂದು ಪವಿತ್ರಾಗೌಡ ಪರ ವಕೀಲರು ಮನವಿ ಮಾಡಿದ್ದು, ಕೋರ್ಟ್ ಅರ್ಜಿ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿತ್ತು. ಇದಲ್ಲದೆ, ಇದೇ ಕೊಲೆ ಪ್ರಕರಣದ ಇಬ್ಬರು ಆರೋಪಿಗಳಾದ ಅನುಕುಮಾರ್ ಹಾಗೂ ಜಗದೀಶ್ ಸಲ್ಲಿಸಿರುವ ಜಾಮೀನು ಅರ್ಜಿಯ ಭವಿಷ್ಯದ ಆದೇಶ ಕೂಡ ಇಂದು ಪ್ರಕಟವಾಗಲಿದೆ.

















