ಇಸ್ಲಮಾಬಾದ್: ಭಾರತದ ಏಟಿಗೆ ಮುದುಡಿಕೊಂಡಿರುವ ಪಾಕ್, ಆ ವೇಳೆ ಜಂಬ ಕೊಚ್ಚಿಕೊಂಡಿದ್ದ ಪಾಕ್, ಈಗ ಸತ್ಯ ಒಪ್ಪಿಕೊಳ್ಳುತ್ತಿದೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಮಾತನಾಡಿದ್ದಾರೆ. ಪಾಕಿಸ್ತಾನದ (Pakistan) ಅಜೆರ್ಬೈಜಾನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ. ಮೇ 10ರಂದು ಬೆಳಗಿನ ಪ್ರಾರ್ಥನೆಯ ನಂತರ ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡಲು ಯೋಜಿಸಿತ್ತು. ಆದರೆ, ಪಾಕಿಸ್ತಾನ ತನ್ನ ಪ್ಲಾನ್ ನ್ನು ಜಾರಿಗೊಳಿಸುವ ಮೊದಲೇ ಭಾರತದ ಸೂಪರ್‌ಸಾನಿಕ್ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಗಳು ಪಾಕಿಸ್ತಾನದ ರಾವಲ್ಪಿಂಡಿ ಸೇರಿದಂತೆ ಹಲವಾರು ಪ್ರಾಂತ್ಯಗಳಲ್ಲಿ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದವು ಎಂದಿದ್ದಾರೆ.
ಈ ಕುರಿತು ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಎದುರೇ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ. “ನಮ್ಮ ಸಶಸ್ತ್ರ ಪಡೆಗಳು ಫಜ್ರ್ ಪ್ರಾರ್ಥನೆಯ ನಂತರ ಬೆಳಿಗ್ಗೆ 4.30ಕ್ಕೆ ಭಾರತಕ್ಕೆ ಉತ್ತರ ನೀಡಲು ಮುಂದಾಗಿದ್ದವು. ಆದರೆ, ಅದಕ್ಕೂ ಮೊದಲೇ ಭಾರತ ಮತ್ತೊಮ್ಮೆ ರಾವಲ್ಪಿಂಡಿಯ ವಿಮಾನ ನಿಲ್ದಾಣ ಸೇರಿದಂತೆ ಪಾಕಿಸ್ತಾನದ ವಿವಿಧ ಪ್ರಾಂತ್ಯಗಳನ್ನು ಗುರಿಯಾಗಿಸಿಕೊಂಡು ಬ್ರಹ್ಮೋಸ್ ಬಳಸಿ ಕ್ಷಿಪಣಿ ದಾಳಿ ನಡೆಸಿದೆ ಎದಿದ್ದಾರೆ.
26 ಅಮಾಯಕ ಜೀವಗಳನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಆಪರೇಷನ್ ಸಿಂದೂರ್ ನ್ನು ಪ್ರಾರಂಭಿಸಿತು. ಮೇ 9 ಹಾಗೂ 10ರ ಮಧ್ಯರಾತ್ರಿ ಎರಡೂ ಕಡೆ ಕಾರ್ಯಾಚರಣೆ ನಡೆಯಿತು. ಭಾರತವು, ದೇಶದ ಉದ್ದಗಲಕ್ಕೂ ಇರುವ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು ಎಂದು ಸತ್ಯ ಒಪ್ಪಿಕೊಂಡಿದ್ದಾರೆ.



















