ಚಂಡೀಗಢ: ಪಾಕ್ ತನ್ನ ಕುತಂತ್ರ ಬುದ್ಧಿ ಮುಂದುವರೆಸಿದ್ದು, ಜನರನ್ನೇ ಟಾರ್ಗೆಟ್ ಮಾಡಿ ದಾಳಿ ನಡೆಸಲು ಆರಂಭಿಸಿದೆ. ಶೆಲ್ ದಾಳಿ ನಡೆಸಿದ ಪರಿಣಾಮ ನಾಲ್ವರು ನಾಗರಿಕರು ಗಾಯಗೊಂಡಿರುವ ಘಟನೆ ನಡೆದಿದೆ.
ಪಾಕ್ ಶೆಲ್ ದಾಳಿಯಿಂದಾಗಿ ಫಿರೋಜ್ ಪುರದಲ್ಲಿ ಒಂದೇ ಕುಟುಂಬದ ಮೂವರು ಗಾಯಗೊಂಡಿದ್ದು, ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಖೈ ಫೆಮೆ ಕಿ ಗ್ರಾಮದ ಮನೆಯೊಂದರ ಮೇಲೆ ಶೆಲ್ ಬಿದ್ದಿದೆ. ಈ ವೇಳೆ ಭಾರೀ ಸ್ಫೋಟ ಸಂಭವಿಸಿದೆ. ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.