ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯ ವಹಿಸಿರುವ ಪಾಕಿಸ್ತಾನ್ ತಂಡ ಭಾರತ ನಮ್ಮಲ್ಲಿಯೇ ಬಂದು ಆಡುವಂತೆ ಪಟ್ಟು ಹಿಡಿದಿದೆ. ಭಾರತ ತಂಡ ಮಾತ್ರ ಯಾವುದೇ ಕಾರಣಕ್ಕೂ ಪಾಕ್ ಗೆ ಹೋಗುವುದಿಲ್ಲ ಎಂದು ಈಗಾಗಲೇ ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿದ ಪಾಕ್, ಒಂದಾದರು ಮ್ಯಾಚ್ ಆಡಿ ಎಂದು ಮನವಿ ಮಾಡುತ್ತಿದೆ.
ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆಯುತ್ತಿರುವ ಈ ಪ್ರತಿಷ್ಠೆಯ ಹೋರಾಟದಿಂದಾಗಿ ಇದೀಗ ಐಸಿಸಿ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿಕೊಂಡಿದೆ. ಪಾಕಿಸ್ತಾನ ಕೂಡ ಈ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಹಿಂದೇಟು ಹಾಕುತ್ತಿದೆ. ಈ ಕಾರಣದಿಂದಾಗಿ ಐಸಿಸಿ, ಬೇರೆ ದೇಶಕ್ಕೆ ಟೂರ್ನಿ ಶಿಫ್ಟ್ ಮಾಡಬಹುದು ಎಂಬ ಸುದ್ದಿಗಳು ಹರಿದಾಡುತ್ತಿವೆ. ಮೊದಲೇ ಸುಮಾರು 28 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಐಸಿಸಿ ಟೂರ್ನಿ ಆಯೋಜಿಸುವ ಅವಕಾಶ ಸಿಕ್ಕಿದೆ. ಹೀಗಾಗಿ ಅದನ್ನು ಕಳೆದುಕೊಳ್ಳಲು ಪಾಕ್ ಮನಸ್ಸು ಮಾಡುತ್ತಿಲ್ಲ. ಇಲ್ಲಿಯವರೆಗೆ ಅಬ್ಬರಿಸಿ ಬೊಬ್ಬರಿದಿದ್ದ ಪಾಕ್ ಕ್ರಿಕೆಟ್ ಮಂಡಳಿ ಹಾಗೂ ಅಲ್ಲಿನ ಸರ್ಕಾರ ಈಗ ಭಾರತದ ಮನವೊಲಿಸಲು ಮುಂದಾಗಿದೆ.
ಚಾಂಪಿಯನ್ಸ್ ಟ್ರೋಫಿಯ ಆತಿಥ್ಯ ಪಾಕಿಸ್ತಾನದ ಕೈತಪ್ಪಿದರೆ ಅದಕ್ಕೂ ಸುಮಾರು 1800ಕೋಟಿ ರೂ. ನಷ್ಟವಾಗಲಿದೆ. ಹೀಗಾಗಿ ಪಾಕಿಸ್ತಾನ, ಪಂದ್ಯಾವಳಿಯ ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಸಿದ್ಧವಾಗಿದೆ ಎಂದು ವರದಿಯಾಗಿದೆ. ಹೀಗಾಗಿ ಭಾರತದ ಮನವೊಲಿಸಲು ಯತ್ನಿಸುತ್ತಿದೆ.