ಬೀದರ್: ನಮ್ಮ ಹೋರಾಟ ಕೇವಲ ವಕ್ಫ್ ವಿರುದ್ಧ ಮಾತ್ರ. ಬೇರೆ ಯಾರ ವಿರುದ್ಧವೂ ಅಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಬೀದರ್ ನಲ್ಲಿ ಮಾತನಾಡಿದ ಅವರು, ನಮ್ಮ ಹೋರಾಟದ ಹಿಂದೆ ಯಾವ ಉದ್ಧೇಶವೂ ಇಲ್ಲ. ಬರೀ ವಕ್ಫ್ ವಿರುದ್ಧ ಮಾತ್ರ ಇದೆ. ಇದು ಜಮೀರ್ ಅಹಮದ್, ಹ್ಯಾರಿಸ್ ವಿರುದ್ಧ ನಡೆಯುತ್ತಿರುವ ಹೋರಾಟ. ನಮ್ಮ ರೈತರ ಜಮೀನು ಉಳಿಸುವುದಕ್ಕಾಗಿ ಈ ಹೋರಾಟ ನಡೆಯುತ್ತಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ವಕ್ಫ್ ವಿವಾದ ಜೋರಾಗಿದೆ. ಬೀದರ್ ಜಿಲ್ಲೆಯಲ್ಲಿ 13,295 ಎಕರೆ ವಕ್ಪ್ ಆಸ್ತಿ ಎಂದು ನಮೂದಾಗಿದೆ. ಈಗಾಗಲೇ ವಕ್ಫ್ ಬೋರ್ಡ್ 217 ಎಕರೆ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಬೀದರ್ ನ ಬಸವಗಿರಿಯ ಬಸವ ಸೇವಾ ಪ್ರತಿಷ್ಠಾನದ 5 ಎಕರೆ 15 ಗುಂಟೆ ಜಾಗದ ಪಹಣಿಯಲ್ಲೂ ವಕ್ಫ್ ಬೋರ್ಡ್ ಹೆಸರು ನಮೂದಾಗಿದೆ ಎಂದು ಆರೋಪಿಸಿದ್ದಾರೆ.
ಆದರೆ, ವಕ್ಫ್ ವಿರುದ್ಧ ಬಿಜೆಪಿಯಲ್ಲೇ ಎರಡು ಗುಂಪುಗಳಾಗಿ ಹೋರಾಟ ನಡೆಯುತ್ತಿದೆ. ಯತ್ನಾಳ್ ಮತ್ತು ತಂಡ ಪ್ರತ್ಯೇಕ ಹೋರಾಟ ನಡೆಸುತ್ತಿದ್ದರೆ, ಬಿವೈ ವಿಜಯೇಂದ್ರ ತಂಡ ಜಾಗೃತಿ ಹೋರಾಟ ಹಮ್ಮಿಕೊಂಡಿದೆ. ಇದು ಬಿಜೆಪಿ ಮುಜುಗರಕ್ಕೆ ಕಾರಣವಾಗಿದೆ.