ನವದೆಹಲಿ: ಪಹಲ್ಗಾಮ್ ನಲ್ಲಿ ನಡೆದ ಪಾಕಿಸ್ತಾನ ಬೆಂಬಲಿತ ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ‘ಆಪರೇಷನ್ ಸಿಂಧೂರ’ (Operation Sindoor) ಕಾರ್ಯಾಚರಣೆ ಮೂಲಕ ಭಾರತ ಪ್ರತೀಕಾರ ತೀರಿಸಿಕೊಂಡಿದ್ದು, ಕಾರ್ಯಾಚರಣೆಯಲ್ಲಿ ಐವರು ಯೋಧರು (Soldiers) ಹುತಾತ್ಮರಾಗಿದ್ದಾರೆ ಎಂದು ಭಾರತೀಯ ಸೇನೆ (Indian Army) ಅಧಿಕೃತವಾಗಿ ತಿಳಿಸಿದೆ.
ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಬಗ್ಗೆ ಮಿಲಿಟರಿ ಅಧಿಕಾರಿಗಳು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ದೇಶಕ್ಕಾಗಿ ಸೇವೆ ಸಲ್ಲಿಸಿ ಹುತಾತ್ಮರಾದ ಯೋಧರಿಗೆ ಭಾರತೀಯ ಸೇನಾಪಡೆ ಗೌರವ ಸಲ್ಲಿಸುತ್ತದೆ. ರ ತ್ಯಾಗಗಳನ್ನು ಯಾವಾಗಲೂ ಸ್ಮರಿಸಲಾಗುವುದು ಎಂದು ಹೇಳಿದ್ದಾರೆ.
ಮೇ 7ರಿಂದ ಮೇ 10 ರ ವರೆಗೆ ಜಮ್ಮು ಕಾಶ್ಮೀರ ಗಡಿಯಲ್ಲಿ (LOC) ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನ ಸುಮಾರು 35ರಿಂದ 40 ಸೇನಾ ಸಿಬ್ಬಂದಿ ಕಳೆದುಕೊಂಡಿದೆ. ಈ ವೇಳೆ ವಿಡಿಯೋ ಸಮೇತ ಸಾಕ್ಷ್ಯಗಳನ್ನು ಸೇನೆ ಬಹಿರಂಗಗೊಳಿಸಿದೆ. ಅಲ್ಲದೇ, ಪಾಕ್ ದಾಳಿ ನಡೆಸಿದರೆ ತೀವ್ರವಾಗಿ ದಾಳಿ ನಡೆಸುತ್ತೇವೆ ಎಂದು ಕೂಡ ಅಧಿಕಾರಿಗಳು ಖಡಕ್ ಆಗಿ ಹೇಳಿದ್ದಾರೆ.



















