ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾಗಿದ್ದ ಮಹಿಳೆಯನ್ನು ಪ್ರೀತಿಸಿದ್ದ ವ್ಯಕ್ತಿ ಮಹಿಳೆಯ ಸಂಬಂಧಿಯ ಕತ್ತು ಕೊಯ್ದಿರುವ ಘಟನೆ ನಡೆದಿದೆ.
ಚಲಿಸುತ್ತಿದ್ದ ಬೈಕ್ ನಲ್ಲಿಯೇ ಕುತ್ತಿಗೆ ಕೊಯ್ದು ಹತ್ಯೆ ಮಾಡಲು ಯತ್ನಿಸಿದ್ದಾನೆ ಎನ್ನಲಾಗಿದೆ. ಜುಲೈ 17 ರಂದು ಹೆಚ್ಎಎಲ್ ನಲ್ಲಿ ಈ ಘಟನೆ ನಡೆದಿದೆ. ತಮಿಳುನಾಡು ಮೂಲದ ಸೆಲ್ವ ಕಾರ್ತಿಕ್ ಗೆ ಇನ್ಸ್ಟಾಗ್ರಾಮ್ ನಲ್ಲಿ ಮಹಿಳೆಯೊಬ್ಬರು ಪರಿಚಯವಾಗಿದ್ದರು. ಇನ್ಸ್ಟಾಗ್ರಾಮ್ ನಲ್ಲಿಯೇ ಮಹಿಳೆಗೆ ಮೆಸೆಜ್ ಮಾಡಿ ಪ್ರೀತಿಸುವಂತೆ ಪೀಡಿಸುತ್ತಿದ್ದ. ಆರೋಪಿಯನ್ನು ತಮಿಳುನಾಡು ತಿರಪ್ಪತ್ತೂರು ಮೂಲದವನು ಎನ್ನಲಾಗಿದೆ. ಯುವತಿಯು ಈ ವಿಚಾರವನ್ನು ತಂದೆಗೆ ಹೇಳಿದ್ದಾಳೆ.
ಆಗ ಯುವತಿಯ ತಂದೆ, ಕಾರ್ತಿಕ್ ಗೆ ಮಾತುಕತೆಗೆಂದು ಎಚ್ಎಎಲ್ ಗೆ ಕರೆಯಿಸಿಕೊಂಡಿದ್ದರು. ತಮ್ಮನ ಮಗ ಸತೀಶ್ ಜೊತೆಗೆ ಬೈಕ್ ನಲ್ಲಿ ಹೋಗಿದ್ದರು. ಬೈಕ್ ನಲ್ಲಿ ಸೆಲ್ವ ಕಾರ್ತಿಕ್ ನನ್ನು ಹಿಂದೆ ಕೂರಿಸಿಕೊಂಡು ಹೋಗುತ್ತಿದ್ದರು. ಬೈಕ್ ನಲ್ಲಿ ಹೋಗುತ್ತಿದ್ದಾಗಲೇ ಆರೋಪಿ ಸೆಲ್ವ ಕಾರ್ತಿಕ್, ಸತೀಶ್ ಕತ್ತು ಕೊಯ್ದಿದ್ದಾನೆ. ಸದ್ಯ ಸತೀಶ್ ಗಂಭೀರವಾಗಿ ಗಾಯಗೊಂಡಿದ್ದು, ಚಿಕೆತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಎಚ್ ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



















