ಇರಾನ್ ಮೇಲೆ ಅಮೆರಿಕ, ಇಸ್ರೇಲ್ ಮುಗಿ ಬಿದ್ದಿವೆ. ಇರಾನ್ ತನ್ನ ಅಕ್ಕಪಕ್ಕದ ಕೊಲ್ಲಿಯ ಇನ್ನಿತರ ರಾಷ್ಟ್ರಗಳ ಮೇಲೂ ಪ್ರಹಾರ ನಡೆಸಿದೆ. ಈ ಮಧ್ಯೆ ಎಕ್ಸ್ ಮುಸ್ಲಿಂ ಅಭಿಯಾನ ಜೋರು ಪಡೆದಿರುವ ಕುರಿತು ಚರ್ಚೆಯಾಗುತ್ತಿದೆ. ಅಂದ್ರೆ ಕೆಲವು ಮುಸ್ಲಿಂರು ತಾವು ಮುಸ್ಲಿಂ ಸಮುದಾಯದವರು ಅಂತಾ ಹೇಳಿಕೊಳ್ಳೋಕೆ ಹಿಂದೆ ಮುಂದೆ ನೋಡುತ್ತಿದ್ದಾರಂತೆ.
2018ರಲ್ಲಿ ಅಮೆರಿಕದ ಪೆವ್ ರಿಸರ್ಚ್ ಸೆಂಟರ್(Pew Research center) ವರದಿಯೊಂದನ್ನು ಬಿಡುಗಡೆ ಮಾಡಿದೆ. ಆ ವರದಿ ಈಗ ವೈರಲ್ ಆಗುತ್ತಿದ್ದರೂ ಅದರಲ್ಲಿನ ಅಂಶ ಈಗ ದುಪ್ಪಟ್ಟಾಗಿ ಬೆಳೆದಿವೆ ಎನ್ನುತ್ತಿವೆ ಮೂಲಗಳು. ಜಗತ್ತಿನಲ್ಲಿ ಈಗ ಮುಸ್ಲಿಂ ಬೇಡ ಅಂತಾ ಹೇಳುವವರ ಸಂಖ್ಯೆ ಹೆಚ್ಚಾಗುತ್ತಿದೆಯಂತೆ. ಮುಸ್ಲಿಂ ಸಮುದಾಯದ ಜನ್ಮಸ್ಥಳ ಅರಬ್ ನಲ್ಲೂ ಆ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆಯಂತೆ. ಮಹಿಳೆಯರ ದೌರ್ಜನ್ಯ, ಧರ್ಮದ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ. ಮಹಿಳೆಯರಿಗೆ ಸ್ವಾತಂತ್ರ್ಯ ಇಲ್ಲ, ಪರ್ಫೆಕ್ಟ್ ಜೀವನ ವ್ಯವಸ್ಥೆ ಇಲ್ಲ ಎಂದು ಹಲವರು ಧರ್ಮ ತೊರೆಯುತ್ತಿದ್ದಾರೆ ಎಂದು ವರದಿ ಹೇಳಿದೆ.
ವರದಿಯಂತೆ, ಅಮೆರಿಕದಲ್ಲಿ ಶೇ. 23ರಷ್ಟು ಜನರು ತಮ್ಮನ್ನು ತಾವು ಮುಸ್ಲಿಂರು ಅಂತಾ ಹೇಳಿಕೊಳ್ಳುತ್ತಿಲ್ಲ. ಹಿಂಜರಿಯುತ್ತಿದ್ದಾರೆ. ಅವರಿಗೆ ಮುಜುಗರ ಆಗುತ್ತಿದೆಯಂತೆ. ಭಾರತದಲ್ಲಿ 1.20 ಕೋಟಿ ಜನ ಮುಸ್ಲಿಂರು ಇಸ್ಲಾಂ ಆಚರಣೆಯಿಂದ ಹಿಂದೆ ಸರಿಯುತ್ತಿದ್ದಾರಂತೆ. ಅರಬ್ ರಾಷ್ಟ್ರದಲ್ಲಿ ಶೇ. 13, ಇರಾನ್ ನಲ್ಲಿ ಶೇ. 50ರಷ್ಟು ಮುಸ್ಲಿಂರು ಧರ್ಮದ ಕಟ್ಟುಪಾಡಿಗೆ ರೋಸಿ ಹೋಗಿ ಧರ್ಮ ಬೇಡ ಅಂತಿದ್ದಾರಂತೆ. ಕಟ್ಟುಪಾಡು, ಸ್ವಯಂ ನಿರ್ಧಾರಗಳಿಗೆ ಸ್ವಾತಂತ್ರ್ಯ ಇಲ್ಲ, ಧರ್ಮ ಹೇಳಿದಂತೆ ಮಾಡಬೇಕು, ಆಧುನೀಕರಗೊಳ್ಳಲೂ ಅವಕಾಶ ಇಲ್ಲ, ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಇಲ್ಲ ಎಂದು ಎಕ್ಸ್ ಮುಸ್ಲಿಂರ ವಾದವಾಗಿದೆ.
ಇರಾನ್ ಮೂಲದ ಲೇಖಕಿ ಮರಿಯಮ್ ನಮಾಜಿ, ಧರ್ಮಗುರುಗಳಿಂದಲೂ ಹಲವು ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ನಿಮಗೆ ಗೊತ್ತಿರಲಿ ಭಾರತದಲ್ಲೂ ಎಕ್ಸ್ ಮುಸ್ಲಿಂ ಚಳುವಳಿ ನಡೆಯುತ್ತಿದೆ. ಎಕ್ಸ್ ಮುಸ್ಲಿಂರಿಗಾಗಿಯೇ ಸಂಸ್ಥೆ ಹುಟ್ಟಿಕೊಂಡಿದೆ. ಕೇರಳದಲ್ಲಿ ಎಕ್ಸ್ ಮುಸ್ಲಿಂ ಆಫ್ ಇಂಡಿಯಾ ಅಂತಾ ಸಂಸ್ಥೆ ಇದೆ. ಈ ಸಂಸ್ಥೆ ಧರ್ಮ ತ್ಯಾಗ ಮಾಡುವವರ ಪರ ನಿಲ್ಲುತ್ತದೆ. ಅಷ್ಟೇ ಅಲ್ಲ 4 ಜನ ಯುಟ್ಯೂಬ್ ನಿಂದ ಎಕ್ಸ್ ಮುಸ್ಲಿಂ ಸಂಘಟನೆ ಮಾಡುತ್ತಿದ್ದಾರೆ. ಎಕ್ಸ್ ಮುಸ್ಲಿಂ ಸಾಹಿಲ್, ಎಕ್ಸ್ ಮುಸ್ಲಿಂ ಸಮೀರ್, ಎಕ್ಸ್ ಮುಸ್ಲಿಂ ಸಲೀಂ ವಾಸ್ತಿಕ್ ಸೇರಿದಂತೆ ಇನ್ನೂ ಹಲವರು ತಮ್ಮ ಪ್ರಶ್ನೆ ಮುಂದಿಟ್ಟುಕೊಂಡು ಎಕ್ಸ್ ಮುಸ್ಲಿಂರ ಬೆಂಬಲವಾಗಿದ್ದಾರೆ.
ಹೀಗಾಗಿ ಇಸ್ಲಾಂ ಮೂಲಭಾತವಾದಿಗಳು ಇಂಥವರ ಮೇಲೆ ಮಾರಣಾಂತಿಕ ಹಲ್ಲೆ ಮಾಡುತ್ತಿವೆ. ಸಲೀಂ ವಾಸ್ತಿಕ್ ಕೂಡ ಹೀಗೆ ಹಲ್ಲೆಗೆ ಒಳಗಾಗಿದ್ದಾರೆ. ಇನ್ನೂ ಇಸ್ಲಾಂ ಮೂಲಭಾತವಾದಿಗಳು ಇಸ್ಲಾಂ ತೊರೆಯುವುದು ಹರಾಮ್ ಅನ್ನುತ್ತಾರೆ. ಜಗತ್ತಿನ 13 ರಾಷ್ಟ್ರಗಳಲ್ಲಿ ಮುಸ್ಲಿಂ ಧರ್ಮ ತೊರೆಯುವುದು ಮರಣದಂಡನೆ ವಿಧಿಸುತ್ತವೆ. ಕೆಲವರು ಮೂಲಭಾತವಾದಿಗಳಿಗೆ ಹೆದರಿ ಮಾಸ್ಕ್ ಹಾಕಿಕೊಂಡು ಮಾತನಾಡುತ್ತಿದ್ದಾರೆ.
ಹಲವರಂತೂ ಮಹಿಳೆಯರ ಮೇಲೆ ದೌರ್ಜನ್ಯ ಕ್ರಿಯೆಟ್ ಮಾಡೋಕೆ ಮುಸ್ಲಿಂ ಹುಟ್ಟಿದೆ ಅಂತಾ ಆರೋಪಿಸುತ್ತಿದ್ದಾರೆ. ಅದು ಕಟ್ಟಳೆಗೆ ಒಳಪಡಿಸುವ ಧರ್ಮ. ಹೀಗಾಗಿ ಧರ್ಮ ತೊರೆಯುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಎಕ್ಸ್ ಮುಸ್ಲಿಂ ಅಭಿಯಾನ ಈಗಷ್ಟೇ ಶುರುವಾಗಿಲ್ಲ. ಅದು 7ನೇ ಶತಮಾನದಿಂದಲೇ ಆರಂಭವಾಗಿದೆ. ಅಬ್ದುಲ್ಲಾ ಅಬ್ನ ಸಾದ್ ಅಬ್ನ ಅಬಿ ಸರಾಹ ಮೊದಲ ಎಕ್ಸ್ ಮುಸ್ಲಿಂ ಎನ್ನಬಹುದು. ಆಗ ಅವರನ್ನು ಮರಣದಂಡನೆ ಶಿಕ್ಷೆಗೆ ಒಳಪಡಿಸಲಾಗಿತ್ತು. ಈಗ ಇಂಟರ್ ನೆಟ್ ಕ್ರಾಂತಿಯಲ್ಲಿ ಇಸ್ಲಾಂ ಎಕ್ಸ್ ಇಸ್ಲಾಂ ಆಗುವವರ ಸಂಖ್ಯೆ ಹೆಚ್ಚಾಗುತ್ತಿದೆಯಂತೆ.
ಇದನ್ನೂ ಓದಿ : ಅಂದು ಇಂದಿರಾ ಗಾಂಧಿಗೆ ಎದುರಾದ ಸ್ಥಿತಿ ಇಂದು ಮೋದಿಗೆ!



















