ಬೆಂಗಳೂರು: ಓಲಾ ಕಂಪನಿಯ ವಿದ್ಯುತ್ ಚಾಲಿತ ಬೈಕ್ ಗಳನ್ನು ಕಳೆದ 5 ತಿಂಗಳಿನಿಂದ ಸರ್ವಿಸ್ ಸೆಂಟರ್ ಸಿಬ್ಬಂದಿಯು ಸರ್ವಿಸ್ ಮಾಡಿಲ್ಲ ಎಂದು ಕಲಬುರಗಿಯಲ್ಲಿ ಗ್ರಾಹಕರು ಕಂಪನಿ ವಿರುದ್ಧ ಸೋಮವಾರ ಪ್ರತಿಭಟನೆ ನಡೆಸಿದ್ದಾರೆ. ಓಲಾ ಕಂಪನಿಯ ಸರ್ವಿಸ್ ಸೆಂಟರ್ ಬಾಗಿಲು ಮುಚ್ಚಿ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ವಿಸ್ ವಿಳಂಬ, ಕಲಬುರಗಿಯಲ್ಲಿ ಓಲಾ ಕಂಪನಿ ವಿರುದ್ಧ ಗ್ರಾಹಕರ ಪ್ರತಿಭಟನೆ pic.twitter.com/6eBB7MYHig
— Kiccha Boss (@KHunasagi1) September 8, 2025
2 ಓಲಾ ಬೈಕ್ ತೆಗೆದುಕೊಂಡ 3 ತಿಂಗಳಲ್ಲೇ ಬ್ಯಾಟರಿ ಹೋಗಿದ್ದು ಸರ್ವಿಸ್ ಗೆ ಅಂತ ಬಿಟ್ಟು 5 ತಿಂಗಳಾದರೂ ರಿಪೇರೀ ಮಾಡಿಲ್ಲ, ಸರ್ವಿಸ್ ಕೇಂದ್ರಕ್ಕೆ 4-5 ಸಲ ಬಂದು ಕೇಳಿದ್ರೂ ಯಾವುದೇ ಸರಿಯಾದ ಮಾಹಿತಿ ಕೊಡುತ್ತಿಲ್ಲ. ಮ್ಯಾನೇಜರ್ ಗೇ ಕೇಳಿ ಅಂತ ಟೆಕ್ನಿಶಿಯನ್ ಹೇಳುತ್ತಾರೆ. ಆದರೆ ಮ್ಯಾನೇಜರ್ ಫೋನ್ ಸ್ವಿಚ್ ಆಫ್ ಮಾಡಿದ್ದು, ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಒಂದು ವರ್ಷದ ಹಿಂದೆ ನಾವು ಎರಡು ಓಲಾ ಬೈಕ್ ಗಳನ್ನು ಖರೀದಿಸಿದ್ದೆವು. ಖರೀದಿಸಿದ ಮೂರೇ ತಿಂಗಳಲ್ಲಿ ಬ್ಯಾಟರಿ ಸಮಸ್ಯೆ ಉಂಟಾಯಿತು. ಐದು ತಿಂಗಳ ಹಿಂದೆಯೇ ಕಲಬುರಗಿಯ ಓಲಾ ಸರ್ವಿಸ್ ಸೆಂಟರ್ ನಲ್ಲಿ ಬೈಕ್ ಬಿಟ್ಟಿದ್ದೇವೆ. ಇದುವರೆಗೆ ನಮ್ಮ ಬೈಕ್ ಸರ್ವಿಸ್ ಮಾಡಿಲ್ಲ. ಟೆಕ್ನಿಶಿಯನ್ಸ್ ಹಾಗೂ ಇಲ್ಲಿನ ಮ್ಯಾನೇಜರ್ ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿಲ್ಲ. ಸರಿಯಾದ ಸ್ಪಂದನೆಯೂ ದೊರೆಯುತ್ತಿಲ್ಲ” ಎಂದು ಓಲಾ ಗ್ರಾಹಕರಾದ ಶರಣಪ್ಪ ವಡಿಗೇರಿ ಕೆಂಭಾವಿ ಹಾಗೂ ಶಕೀಲ್ ಪಟೇಲ್ ವಡಿಗೇರಿ ಆರೋಪಿಸಿದ್ದಾರೆ.