ಐಸಿಸಿ ಟೆಸ್ಟ್ ಬೌಲರ್ ಗಳ ನೂತನ ಶ್ರೇಯಾಂಕ ಪಟ್ಟಿ ಬಿಡುಗಡೆಯಾಗಿದ್ದು, ಭಾರತೀಯ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ದಾಖಲೆಯ ಅಂಕಗಳೊಂದಿಗೆ ಅಗ್ರಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.
ಈ ಮೂಲಕ ಐಸಿಸಿ ರ‍್ಯಾಂಕಿಂಗ್ ಇತಿಹಾಸದಲ್ಲಿ 900+ ಅಂಕಗಳನ್ನು ಪಡೆದ ಭಾರತದ 2ನೇ ಬೌಲರ್ ಎಂಬ ದಾಖಲೆ ಬರೆದಿದ್ದಾರೆ. ಅಲ್ಲದೇ, ಬುಮ್ರಾ, ಭಾರತ ತಂಡದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಸರ್ವಶ್ರೇಷ್ಠ ರೇಟಿಂಗ್ ಸಾಧನೆ ಸರಿಗಟ್ಟಿದ್ದಾರೆ.
2016 ರಲ್ಲಿ ರವಿಚಂದ್ರನ್ ಅಶ್ವಿನ್ ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ಬರೋಬ್ಬರಿ 904 ಅಂಕಗಳನ್ನು ಗಳಿಸಿದ್ದರು. ಈಗ ಈ ದಾಖಲೆಯನ್ನು ಬುಮ್ರಾ ಸರಿಗಟ್ಟಿದ್ದಾರೆ. ಅಲ್ಲದೇ, ಇನ್ನೊಂದು ಅಂಕ ಪಡೆದರೆ ಟೆಸ್ಟ್ನಲ್ಲಿ ಅತ್ಯಧಿಕ ರೇಟಿಂಗ್ ಪಡೆದ ಭಾರತೀಯ ಬೌಲರ್ ಎನಿಸಿಕೊಳ್ಳಲಿದ್ದಾರೆ.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ರೇಟಿಂಗ್ ಪಡೆದ ಬೌಲರ್ ಎಂಬ ದಾಖಲೆ ಇಂಗ್ಲೆಂಡ್ ಬೌಲರ್ ಸಿಡ್ನಿ ಬಾರ್ನ್ಸ್ ಹೆಸರಿನಲ್ಲಿದೆ. 1914 ರಲ್ಲಿ 932 ರೇಟಿಂಗ್ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ.