ಬೆಂಗಳೂರು: ಹಾಲಿನ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಬಿಜೆಪಿ ವತಿಯಿಂದ ರಾಜ್ಯಾದ್ಯಂತ ವಿನೂತನ ಪ್ರತಿಭಟನೆ ನಡೆಯಿತು.
ರಸ್ತೆಯ ಮೇಲೆ ಹಸುಗಳನ್ನು ತಂದು ನಿಲ್ಲಿಸಿ, ರಸ್ತೆಯ ಮೇಲೆಯೇ ಹಾಲು ಕಾಯಿಸಿ, ಹೆಗಲ ಮೇಲೆ ನೇಗಿಲು-ಗುದ್ದಲಿ ಹೊತ್ತು, ಹೀಗೆ ಹಲವು ರೀತಿಯಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.
ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಹಸುಗಳನ್ನು ಕರೆತಂದು ಹಾಲಿನ ದರ ಏರಿಕೆಯ ವಿರುದ್ಧ ಪ್ರತಿಭಟಿಸಿದರು. ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯಲಾಯಿತು. ಕೈಯಲ್ಲಿ ಹಾಲಿನ ಪ್ಯಾಕೆಟ್ ಹಿಡಿದು ಬಂದಿದ್ದ ಪ್ರತಿಭಟನಾಕಾರರು, ರಸ್ತೆ ತಡೆದು ಅಲ್ಲಿಯೇ ಹಾಲನ್ನು ಕಾಯಿಸಿದರು. ಕಾಂಗ್ರೆಸ್ಸಿನ ವಿರುದ್ಧ ಘೋಷಣೆ ಕೂಗಿದರು. ಆದರೆ, ಈ ಪರಿಸ್ಥಿತಿಯ ಲಾಭ ಪಡೆಯಬೇಕಿದ್ದ ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಗೈರಾಗಿದ್ದರು. ಹಲವು ನಾಯಕರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.