ಉತ್ತರ ಪ್ರದೇಶದ ಹಲವೆಡೆ ವ್ಯಾಪಕ ಮಳೆ ಆರ್ಭಟ ಮುಂದುವರಿದಿದೆ. ಪರಿಣಾಮ ವಾರಾಣಸಿಯ ಐತಿಹಾಸಿಕ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ.
ಇಲ್ಲಿನ ನಮೋ ಘಾಟ್ ನ ಸ್ನಾನ ಘಟ್ಟಕ್ಕೆ ನುಗ್ಗಿರುವ ಗಂಗಾ ನದಿ ಪ್ರವಾಹ ಸಂಪೂರ್ಣ ಆಪೋಷನ ಪಡೆದಿದೆ. ಇಲ್ಲಿನ ಸುಪ್ರಸಿದ್ಧ ಸ್ನಾನ ಘಟ್ಟ ಮತ್ತು ಅಲ್ಲಿನ ಕಲಾಕೃತಿಗಳೆಲ್ಲಾ ಜಲಮಯವಾಗಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಭಕ್ತರಿಗೆ ಸ್ನಾನ ಘಟ್ಟ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.



















