ಭಾರತದಲ್ಲಿ ಹಲವಾರು ಸಂಗೀತ ನಿರ್ದೇಶಕರು, ಸಂಗೀತಗಾರರು ಇದ್ದಾರೆ. ಸಿನಿಮಾ ನಟ-ನಟಿಯರಂತೆ ಸಂಗೀತಗಾರರಿಗೂ ಅಭಿಮಾನಿಗಳಿದ್ದಾರೆ. ಈ ಮಧ್ಯೆ ಹಲವಾರು ದಿಗ್ಗಜರು ಸಿನಿಮಾ ಸಂಗೀತ ಲೋಕವನ್ನು ಆಳಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್. ರೆಹಮಾನ್ ಕೂಡ ಈ ಸಾಲಿಗೆ ನಿಂತಿದ್ದಾರೆ. ಸದ್ಯ ವಿಷಯ ಏನಂದ್ರೆ, ಒಂದು ಹಾಡಿಗೆ ರೆಹಮಾನ್ ಪಡೆಯುವ ಸಂಭಾವನೆ ಎಷ್ಟು? ಎಂಬುವುದು.
ಹೌದು ಅಭಿಮಾನಿಗಳಲ್ಲಿ ಈ ರೀತಿಯ ಚರ್ಯೆಯೊಂದು ಶುರುವಾಗಿದೆ. ವರದಿಯಂತೆ, ರೆಹಮಾನ್ ಒಂದು ಹಾಡಿಗೆ ಬರೋಬ್ಬರಿ 3 ಕೋಟಿ ರೂ. ಪಡೆಯುತ್ತಾರೆ ಎನ್ನಲಾಗುತ್ತಿದೆ. ಈಗಾಗಲೇ ರೆಹಮಾನ್ ಸಾವಿರಾರು ಸೂಪರ್ ಹಿಟ್ ಗೀತೆಗಳನ್ನು ನೀಡಿದ್ದಾರೆ. ದಕ್ಷಿಣ ಭಾರತ ಹಾಗೂ ಬಾಲಿವುಡ್ ನಲ್ಲಿ ತಮ್ಮದೆಯಾದ ಛಾಪು ಮೂಡಿಸಿದ್ದಾರೆ.
ಒಂದು ಹಾಡಿಗೆ ಧ್ವನಿ ನೀಡಲು ಅವರು ಪಡೆಯುವ ಸಂಭಾವನೆ 3 ಕೋಟಿ ರೂ. ಸ್ಟಾರ್ ಸಿಂಗರ್ಸ್ ಎನಿಸಿಕೊಂಡ ಸೋನು ನಿಗಮ್, ಶ್ರೇಯಾ ಘೋಷಾಲ್ ಸೇರಿದಂತೆ ಹಲವರ ಸಂಭಾವನೆಗಿಂತ 15 ಪಟ್ಟು ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಎ.ಆರ್. ರೆಹಮಾನ್ ಅವರು ಪೂರ್ಣಾವಧಿ ಸಿಂಗರ್ ಅಲ್ಲ. ಸಂಗೀತ ನಿರ್ದೇಶಕನಾಗಿ ಕೆಲಸ ಮಾಡುತ್ತಾರೆ. ಹಾಗಿದ್ದರೂ ಕೂಡ ಅಲ್ಲೊಂದು ಇಲ್ಲೊಂದು ಹಾಡುಗಳಿಗೆ ಮಾತ್ರ ಅವರು ಧ್ವನಿ ನೀಡುತ್ತಾರೆ. ಆದರೂ ಅವರಿಗೆ ಹೆಚ್ಚು ಬೇಡಿಕೆಯಿದೆ.
ಗಾಯನಕ್ಕಾಗಿ ತಮ್ಮನ್ನು ಯಾರೂ ಕರೆಯಬಾರದು ಎಂದು 3 ಕೋಟಿ ರೂ. ಸಂಭಾವನೆಯನ್ನು ಎ.ಆರ್. ರೆಹಮಾನ್ ನಿಗದಿ ಮಾಡಿಕೊಂಡಿದ್ದಾರೆ ಎಂದು ಕೂಡ ಹೇಳಲಾಗುತ್ತದೆ. ಆದರೂ ಹಲವರು ಇಷ್ಟೊಂದು ಸಂಭಾವನೆ ನೀಡಿ ಅವರಿಂದಲೇ ಹಾಡಿಸುತ್ತಾರೆ.
ಶ್ರೇಯಾ ಘೋಷಾಲ್, ಸುನಿಧಿ ಚೌಹಾಣ್, ಸೋನು ನಿಗಮ್ ಅವರು 20 ಲಕ್ಷ ರೂ.ನಿಂದ 25 ಲಕ್ಷ ರೂ. ವರೆಗೂ ಒಂದು ಹಾಡಿಗೆ ಪಡೆಯುತ್ತಾರೆ ಎನ್ನಲಾಗುತ್ತಿದೆ.