ಬೆಂಗಳೂರು: SRGA ಸಂಸ್ಥೆ ಹೆಸರಿನಲ್ಲಿ ಫೇಕ್ ಗ್ರೂಪ್ ಕ್ರಿಯೇಟ್ ಮಾಡಿ ವಂಚಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ವಂಚನೆಗೊಳಗಾದ 20ಕ್ಕೂ ಅಧಿಕ ಜನರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಂಚನೆಗೊಳಗಾದವರು ಯಶವಂತಪುರ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಲಕ್ಷಾಂತರ ರೂ. ಮೌಲ್ಯದ ಹಣ ಪಡೆದು ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಆರಂಭದಲ್ಲಿ 2500ರೂ. ಹಣ ಪಡೆದು ದಿನ ನಿತ್ಯ 50 ರೂ ಕೊಡುವುದಾಗಿ ಭರವಸೆ ನೀಡಿ ವಂಚಿಸಿದ್ದಾರೆ ಎನ್ನಲಾಗಿದೆ.
ಮೂರು ತಿಂಗಳ ಕಾಲ ಈ ರೀತಿ ಹಣ ಕೊಡುವುದಾಗಿ ನಂಬಿಸಿ ವಂಚಿಸಿದ್ದಾರೆ ಎನ್ನಲಾಗಿದೆ. ಹಲವರು ಹಣದಾಸೆಗೆ ಈ ರೀತಿ ಹೆಚ್ಚು ಹಣ ಇನ್ವೆಸ್ಟ್ ಮಾಡಿದ್ದರು ಎನ್ನಲಾಗಿದೆ. ಕೆಲವು ಪ್ಲ್ಯಾನ್ ಗಳ ಆಧಾರದ ಮೇಲೆ ಹಲವರು ಹಣ ಹೂಡಿಕೆ ಮಾಡಿದ್ದರು. ಆರೋಪಿಗಳು ಜಾಸ್ತಿ ಹಣ ಇನ್ವೆಸ್ಟ್ ಮಾಡಿಸಿಕೊಂಡು ವಂಚಿಸಿದ್ದಾರೆ ಎನ್ನಲಾಗಿದೆ.
ಪರಂ ಮತ್ತು ಲತಾ ಎಂಬ ಇಬ್ಬರು ವ್ಯಕ್ತಿಗಳ ಮೇಲೆ ದೂರುದಾರರು ಆರೋಪ ಮಾಡಿದ್ದಾರೆ. ಅವರಿಬ್ಬರು ಕೂಡ ಬೇರೆಯವರ ಕೆಳಗೆ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಆರಂಭದಲ್ಲಿ ಮನೆ ಮನೆಗೆ ಬಂದು ರಿಜಿಸ್ಟರ್ ಮಾಡಿಸಿದ್ದರು ಎನ್ನಲಾಗಿದೆ. ಹಣ ಪಡೆದು ಡಾಲರ್ ಕನ್ವರ್ಟ್ ಮಾಡಿಸಿದ್ದಾರೆ ಎಂದು ಲತಾ ಹಾಗೂ ಪರಂ ಹೇಳಿದ್ದಾರೆ.
ಪರಂ 98 ಲಕ್ಷ ರೂ. ಹಾಗೂ ಲತಾ 60 ಲಕ್ಷ ರೂ. ಕಲೆಕ್ಟ್ ಮಾಡಿದ್ದರು ಎನ್ನಲಾಗಿದೆ. ಒಬ್ಬರಿಂದ ಒಬ್ಬರಿಗೆ ಈ ಮಾಹಿತಿ ಹರಡಿ ಗ್ರೂಪ್ ಕ್ರಿಯೇಟ್ ಮಾಡಿದ್ದರು ಎನಲಾಗಿದೆ. ಬೇರೆಯವರನ್ನು ಸೇರಿಸಿದರೆ ಕಮಿಷನ್ ನೀಡುವ ಭರವಸೆ ನೀಡಿದ್ದಾರೆ. ಹೀಗಾಗಿ ಕೆಲವರು ಸುಮಾರು 10 ಲಕ್ಷ ರೂ.ವರೆಗೂ ಹಣ ಇನ್ವೆಸ್ಟ್ ಮಾಡಿ ಮೋಸ ಹೋಗಿದ್ದಾರೆ ಎನ್ನಲಾಗಿದೆ. ಈ ಕುರಿತು ಉತ್ತರ ವಿಭಾಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.