ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ “ಭಾರತ-ಅಮೆರಿಕ ಪಾಲುದಾರಿಕೆ” ಹೇಳಿಕೆಗಳ ಬಗ್ಗೆ ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ ನೀಡಿದ್ದು, “ಟ್ರಂಪ್ ಮುಂದೆ ಶರಣಾಗತಿ 1.4 ಬಿಲಿಯನ್ ಭಾರತೀಯರಿಗೆ ಮಾಡಿದ ಅವಮಾನ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಟ್ರಂಪ್ ಅವರನ್ನು ಮೆಚ್ಚಿಸಲು ದೇಶಾದ್ಯಂತ ಹತ್ತಿ ರೈತರನ್ನು ಪಣಕ್ಕಿಡಲಾಗುತ್ತಿದೆ. ಎರಡು ದೇಶಗಳ ನಡುವೆ ಯಾವ ರೀತಿಯ ಮಾತುಕತೆ ನಡೆಯುತ್ತಿದೆ? ಕೇವಲ ಏಕಪಕ್ಷೀಯ ಮಾತುಕತೆಯೇ ನಮ್ಮ ರೈತರು, ವ್ಯಾಪಾರಿಗಳು ಹಾಗೂ ಯುವಕರ ಉದ್ಯೋಗವನ್ನು ಸಾಲಿನಲ್ಲಿ ಇಟ್ಟುಕೊಂಡು, ಭಾರತೀಯ ಮಾರುಕಟ್ಟೆಯನ್ನು ಅಮೆರಿಕನ್ನರಿಗೆ ಸಂಪೂರ್ಣವಾಗಿ ತೆರೆಯಲಾಗುತ್ತಿದೆ. ಇಡೀ ಭಾರತೀಯ ಮಾರುಕಟ್ಟೆ ಅಮೆರಿಕನ್ನರ ನಿಯಂತ್ರಣಕ್ಕೆ ಬಂದರೆ, ನಮ್ಮ ಜನರು ಎಲ್ಲಿಗೆ ಹೋಗಬೇಕು?” ಎಂದು ಕಿಡಿ ಕಾರಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡೂ ರಾಷ್ಟ್ರಗಳ ನಡುವಿನ ವ್ಯಾಪಾರ ಅಡೆತಡೆಗಳನ್ನು ಪರಿಹರಿಸಿ ಉಭಯ ದೇಶಗಳು ಸಂಬಂಧ ಮರಳಿ ಹಳಿಗೆ ತರಲು ಪ್ರಯತ್ನಗಳನ್ನೂ ನಡೆಸುತ್ತಿದ್ದು ಮಾತನಾಡಲು ಕಾತರದಿಂದ ಕಾಯುತ್ತಿದ್ದೇನೆ’ ಎಂಬ ಪೋಸ್ಟ್‌ಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಪ್ರತಿಕ್ರಿಯೆ ನೀಡಿದ್ದಾರೆ.
ಎಕ್ಸ್ ಪೋಸ್ಟ್ ನಲ್ಲಿ ”ಭಾರತ ಮತ್ತು ಅಮೆರಿಕ ನಿಕಟ ಸ್ನೇಹಿತರು ಮತ್ತು ನೈಸರ್ಗಿಕ ಪಾಲುದಾರರು. ನಮ್ಮ ವ್ಯಾಪಾರ ಮಾತುಕತೆಗಳು ಭಾರತ-ಅಮೆರಿಕ ಪಾಲುದಾರಿಕೆಯ ಅಪರಿಮಿತ ಸಾಮರ್ಥ್ಯಗಳ ಅಡೆತಡೆ ನಿವಾರಿಸಲು ದಾರಿ ಮಾಡಿಕೊಡುತ್ತವೆ ಎಂದು ನನಗೆ ವಿಶ್ವಾಸವಿದೆ. ನಮ್ಮ ತಂಡಗಳು ಈ ಚರ್ಚೆಗಳನ್ನು ಆದಷ್ಟು ಬೇಗ ಮುಗಿಸಲು ಕೆಲಸ ಮಾಡುತ್ತಿವೆ. ಅಧ್ಯಕ್ಷ ಟ್ರಂಪ್ ಅವರೊಂದಿಗೆ ಮಾತನಾಡಲು ನಾನು ಎದುರು ನೋಡುತ್ತಿದ್ದೇನೆ. ನಮ್ಮ ಎರಡೂ ಜನರಿಗೆ ಉಜ್ವಲ, ಹೆಚ್ಚು ಸಮೃದ್ಧ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ.” ಎಂದು ಬರೆದಿದ್ದಾರೆ.